ಬೆಂಗಳೂರು: ಟ್ರಾಫಿಕ್ ಪೊಲೀಸರು ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆ ವೇಳೆ ಮೂರು ಸಾವಿರಕ್ಕೆ ಡಿಮ್ಯಾಂಡ್ ಮಾಡಿದ್ದು, ಗೂಗಲ್ ಪೇ ಮಾಡ್ತೀನಿ ಅಂದರೆ ಕ್ಯಾಶ್ ಕೊಡುವಂತೆ ಒತ್ತಾಯ ಮಾಡಿದ್ದಲ್ಲದೆ ಮರು ದಿನ ಕೋರ್ಟ್ ನಲ್ಲಿ ದಂಡ ಪಾವತಿಸಿ ಗಾಡಿ ವಾಪಸ್ ಕೇಳಲು ಬಂದವನಿಗೆ ಥಳಿಸಿದ ಆರೋಪ ವಿಜಯ ನಗರ ಟ್ರಾಫಿಕ್ ಪೊಲೀಸರ ವಿರುದ್ಧ ಕೇಳಿಬಂದಿದೆ. ಪೊಲೀಸರ ಕ್ರೌರ್ಯಕ್ಕೆ ಬೈಕ್ ಸವಾರ ಈಶ್ವರ್ ಆಸ್ಪತ್ರೆ ಸೇರಿದ್ದಾರೆ. ಆಸ್ಪತ್ರೆಯಿಂದ ವಿಡಿಯೋ ಮಾಡಿ ಘಟನೆ ಬಗ್ಗೆ ಹಲ್ಲೆಗೊಳಗಾದ ಈಶ್ವರ್ ವಿಜಯ ನಗರ ಠಾಣೆ ಎಸ್ಐ ಶಾಂತರಾಮ್ ಹಾಗೂ ಸಿಬ್ಬಂದಿ ಸಿದ್ಧಿಕ್ ಮೇಲೆ ಆರೋಪ ಮಾಡಿದ್ದಾರೆ.
ಇನ್ನುಂದೆ ATM, PhonePe, GooglePay, Paytm ಅಪ್ಲಿಕೇಶನ್ ಮೂಲಕ PF ಹಣವನ್ನು ಪಡೆಯಬಹುದು.!
ಮಾರ್ಚ್ 14ರಂದು ರಾತ್ರಿ ನಾನು ಜಿಟಿ ಮಾಲ್ ಬಳಿ ಆರ್ಎಕ್ಸ್ ಬೈಕ್ ಮೇಲೆ ಹೋಗುತ್ತಿದ್ದಾಗ, ವಿಜಯನಗರ ಟ್ರಾಫಿಕ್ ಪೊಲೀಸರು ನಿಲ್ಲಿಸಿ, ತಪಾಸಣೆ ನಡೆಸಿದರು. ಈಶ್ವರ್ ಅವರು ಮದ್ಯ ಸೇವಿಸಿರುವುದು ಧೃಡವಾಗಿದೆ. ಆಗ, ಟ್ರಾಫಿಕ್ ಪೊಲೀಸರು 10 ಸಾವಿರ ರೂ. ದಂಡ ಆಗುತ್ತೆ, ಅದರ ಬದಲಿಗೆ 3 ಸಾವಿರ ರೂ. ನೀಡಿದರೆ ಬಿಟ್ಟು ಕಳುಹಿಸುತ್ತೇವೆ ಎಂದರು. ಆಗ ನಾನು 3 ಸಾವಿರ ರೂಪಾಯಿ ಫೋನ್ ಪೇ ಮಾಡಲು ಮುಂದಾದೆ ಆದರೆ, ಟ್ರಾಫಿಕ್ ಪೊಲೀಸರು ಕ್ಯಾಶ್ ನೀಡುವಂತೆ ಹೇಳಿದರು. ಆಗ ನಾನು, ಕ್ಯಾಶ್ ಇಲ್ಲ, 10 ಸಾವಿರ ರೂ. ದಂಡವನ್ನು ಕೋರ್ಟ್ನಲ್ಲಿ ಕಟ್ಟುತ್ತೇನೆ ಎಂದೆ. ಅದಕ್ಕೆ ಟ್ರಾಫಿಕ್ ಪೊಲೀಸರು ನನ್ನ ಗಾಡಿ ಸೀಜ್ ಮಾಡಿದರು.”
“ನಂತರ, ಹೊಯ್ಸಳ ಕರೆಸಿ, ನನ್ನನ್ನು ಗೋವಿಂದರಾಜ ನಗರ ಠಾಣೆಗೆ ಕರೆದುಕೊಂಡು ಹೋದರು. ಕರ್ತವ್ಯಕ್ಕೆ ಅಡ್ಡಿ ಪಡಿಸುತ್ತೀಯಾ ಅಂತ ಕೇಸ್ ಹಾಕುವುದಾಗಿ ಬೆದರಿಕೆ ಹಾಕಿದರು. ಬಳಿಕ ನಾನು, ಕೋರ್ಟ್ನಲ್ಲಿ ದಂಡ ಪಾವತಿ ಮಾಡುತ್ತೇನೆ ಅಂತ ಹೇಳಿ ಮನೆಗೆ ಹೋದೆ. ಮಾರ್ಚ್ 15ರಂದು ಕೋರ್ಟ್ ಹೋಗಿ ಬಾಕಿ ದಂಡ ಸೇರಿ 13 ಸಾವಿರ ಪಾವತಿ ಮಾಡಿದೆ. ದಂಡ ಪಾವತಿ ರಶೀದಿಯೊಂದಿಗೆ ಬೈಕ್ ಕೊಡುವಂತೆ ನನ್ನ ಸ್ನೇಹಿತ ಮಾರ್ಚ್ 16ರಂದು ಠಾಣೆಗೆ ಹೋಗಿದ್ದರು.”
“ಬಳಿಕ, ಪೊಲೀಸರು ನನ್ನನ್ನು ವಿಜಯನಗರ ಠಾಣೆಗೆ ಕರೆಸಿಕೊಂಡರು. ಠಾಣೆಯಲ್ಲಿ ಎಸ್ಐ ಶಾಂತರಾಮ್ ಹಾಗೂ ಸಿಬ್ಬಂದಿ ಸಿದ್ಧಿಕ್ ನನ್ನ ಮೇಲೆ ಹಲ್ಲೆ ಮಾಡಿದರು. ನಮಗೆ 3 ಸಾವಿರ ಕೊಟ್ಟಿದ್ರೆ 10 ಸಾವಿರ ಉಳಿತಿತಲ್ವಾ ಅಂತ ಹೇಳಿ ಹಲ್ಲೆ ಮಾಡಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೂಟ್ನಿಂದ ಒದ್ದು ಥಳಿಸಿದ್ದಾರೆ” ಎಂದು ಈಶ್ವರ್ ಆರೋಪ ಮಾಡಿದ್ದಾರೆ.