ಗದಗ:- PSI ಬಂಧನಕ್ಕೆ ಆಗ್ರಹಿಸಿ ಶ್ರೀರಾಮ ಸೇನೆ ಕಾರ್ಯಕರ್ತರು ಹಾಗೂ ಗೋಸಾವಿ ಸಮಾಜ ಕೊಟ್ಟಿರುವ ಬಂದ್ ಗೆ ಸಹಕಾರ ನೀಡಿದ ಅಂಗಡಿ ಮಾಲೀಕರಿಗೆ ಅಭಿನಂದನೆ ಸಲ್ಲಿಸಲಾಗಿದೆ.
ಬಂದ್ ಗೆ ಸಹಕಾರ ನೀಡಿದ ಅಂಗಡಿ ಮಾಲೀಕರಿಗೆ ಗುಲಾಬಿ ಹೂ ನೀಡಿ ಅಭಿನಂದನೆ ಸಲ್ಲಿಸಲಾಗಿದೆ. ಪಿಎಸ್ಐ ಅಮಾನತ್ತು ಮಾಡುವಂತೆ
ಒತ್ತಾಯಿಸಿ ನೆನ್ನೆ ಲಕ್ಷ್ಮೇಶ್ವರ ಪಟ್ಟಣ ಬಂದ್ ಗೆ ಶ್ರೀರಾಮ ಸೇನೆ ಕರೆ ಕೊಟ್ಟಿತ್ತು.
ಅಂಗಡಿ ಮುಂಗಟ್ಟುಗಳನ್ನ ಬಂದ್ ಮಾಡಿ ಬಂದ್ ಗೆ ವ್ಯಾಪಾರಸ್ಥರು ಸಹಕಾರ ನೀಡಿದ್ದರು. ಶ್ರೀರಾಮ ಸೇನೆ ಹಾಗೂ ಗೋಸಾವಿ ಸಮಾಜ ಕರೆ ನೀಡಿದ್ದ ಬಂದ್ ಗೆ ಕರೆ ನೀಡಲಾಗಿತ್ತು. ಇಂದು ಪ್ರತಿ ಅಂಗಡಿಗೆ ತೆರಳಿ ಗುಲಾಬಿ ಹೂ ನೀಡಿ ಅಭಿನಂದನೆ ಸಲ್ಲಿಸಲಾಗಿದೆ. ಕಲಂ. 163 ಜಾರಿ ಮಾಡಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ನಿಷೇಧಾಜ್ಞೆ ನಡುವೆಯೂ ಶ್ರೀರಾಮಸೇನೆ ಪ್ರತಿಭಟನೆ ಮಾಡಿತ್ತು.
ಪಿಎಸ್ಐ ಅಮಾನತ್ತು ಮಾಡೋ ವರೆಗೂ ಹೋರಾಟ ನಿರಂತರ ಎಂದು ಶ್ರೀರಾಮಸೇನೆ ಕಾರ್ಯಕರ್ತರು ಹೇಳಿದ್ದಾರೆ