ಭಾರತ ತಂಡದ ಹೆಡ್ ಕೋಚ್ ಹುದ್ದೆಯನ್ನು ಯಶಸ್ವಿಯಾಗಿ ಮುಗಿಸಿರುವ ರಾಹುಲ್ ದ್ರಾವಿಡ್ ಅವರಿಗೆ ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ದೊಡ್ಡ-ದೊಡ್ಡ ಅವಕಾಶಗಳು ಬರುತ್ತಿವೆ.
ವಿದೇಶಿ ಕೋಚ್ಗಳಿಂದ ಮಾತ್ರ ಟೀಮ್ ಇಂಡಿಯಾ ಐಸಿಸಿ ಟ್ರೋಫಿ ಗೆಲ್ಲುತ್ತೆ ಅನ್ನೋ ಮಾತಿತ್ತು. ಆದ್ರೀಗ ಆ ಮಾತನ್ನ ನಿರ್ಗಮಿತ ಹೆಡ್ಕೋಚ್ ರಾಹುಲ್ ದ್ರಾವಿಡ್ ಸುಳ್ಳಾಗಿಸಿದ್ದಾರೆ. ಓರ್ವ ದೇಶಿ ಕೂಡ ತಂಡವನ್ನ ಚಾಂಪಿಯನ್ ಪಟ್ಟಕ್ಕೇರಿಸಬಹುದು ಅನ್ನೋದನ್ನ ಟಿ20 ವಿಶ್ವಕಪ್ ಗೆಲ್ಲಿಸಿ ತೋರಿಸಿಕೊಟ್ಟಿದ್ದಾರೆ. 17 ವರ್ಷಗಳ ಕಪ್ ಬರ ನೀಗಿಸಿ, ಭಾರತದ ಕೀರ್ತಿಯನ್ನ ಪತಾಕೆಯನ್ನ ಜಗದಗಲಕ್ಕೆ ಪಸರಿಸಿದ ಚಾಂಪಿಯನ್ ಕ್ಯಾಪ್ಟನ್ ರಾಹುಲ್ ದ್ರಾವಿಡ್ ಅವರಿಗೆ ಇನ್ನಿಲ್ಲದ ಡಿಮ್ಯಾಂಡ್ ಬಂದಿದೆ.
ಕೊಹ್ಲಿ ಅಭಿಮಾನಿಗಳಿಗೆ ಗುಡ್ ನ್ಯೂಸ್: ವಿರಾಟ್ ಬಾಲ್ಯದ ಕೋಚ್ ಹೇಳಿದ್ದೇನು?
2021ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಬಳಿಕ ಭಾರತ ತಂಡಕ್ಕೆ ರಾಹುಲ್ ದ್ರಾವಿಡ್ ಹೆಡ್ ಕೋಚ್ ಆಗಿದ್ದರು. ನಂತರ ಇವರ ಮಾರ್ಗದರ್ಶನದಲ್ಲಿ ಭಾರತ ತಂಡ, 2022ರ ಟಿ20 ವಿಶ್ವಕಪ್ ಸೆಮಿಫೈನಲ್, 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರನ್ನರ್ ಅಪ್, 2023ರ ಟೆಸ್ಟ್ ವಿಶ್ವ ಚಾಂಪಿಯನ್ಷಿಪ್ ಫೈನಲ್ನಲ್ಲಿ ರನ್ನರ್ ಅಪ್ ಆಗಿತ್ತು. ಇದೀಗ 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.
ಆ್ಯಂಡಿ ಫ್ಲವರ್ ಆರ್ಸಿಬಿ ತಂಡದ ಹೆಡ್ಕೋಚ್ ಆದ್ರು ಆರ್ಸಿಬಿ ಹಣೆಬರಹ ಮಾತ್ರ ಬದಲಾಗ್ಲಿಲ್ಲ. ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ ಕೂಡ ವೈಫಲ್ಯ ಕಂಡಿದ್ದಾರೆ. ಹೀಗಾಗಿ ಮುಂದಿನ ಆವೃತ್ತಿಯಲ್ಲಿ ಆರ್ಸಿಬಿ ಮೇಜರ್ ಸರ್ಜರಿ ನಡೆಸ್ತಿದೆ ಎಂದು ಹೇಳಲಾಗ್ತಿದೆ. ಹಾಗೊಂದು ವೇಳೆ ಮಾಡಿದ್ದೆ ಆದ್ರೆ ಚಾಂಪಿಯನ್ ಕ್ಯಾಪ್ಟನ್ ದ್ರಾವಿಡ್ಗೆ ಅದೃಷ್ಟದ ಬಾಗಿಲು ತೆರೆಯಲಿದೆ. ಆರ್ಸಿಬಿ ಮಾಜಿ ನಾಯಕನಾಗಿರೋ ದ್ರಾವಿಡ್, ತವರಿನ ತಂಡ ಸೇರ್ಪಡೆಗೊಂಡ್ರೆ 2025 ರಲ್ಲಿ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯಬಹುದು.
ಐಪಿಎಲ್ ಫ್ರಾಂಚೈಸಿಗಳು ರಾಹುಲ್ ದ್ರಾವಿಡ್ಗಾಗಿ ತೀವ್ರ ಪೈಪೋಟಿ ನಡೆಸುತ್ತಿವೆ. ತರಬೇತುದಾರ ಅಥವಾ ಮೆಂಟರ್ ಆಗಿ ಯಾವುದಾದರೂ ಒಂದು ತಂಡವನ್ನು ಸೇರಲು ದ್ರಾವಿಡ್ ಎದುರು ನೋಡುತ್ತಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ದ್ರಾವಿಡ್ಗಾಗಿ ಎಲ್ಲಾ ಫ್ರಾಂಚೈಸಿಗಳಿಗಿಂತ ಒಂದು ಹೆಜ್ಜೆ ಮುಂದಿಟ್ಟಿದೆ.