ಕಲಬುರ್ಗಿ:- ಲಂಚಕ್ಕೆ ಡಿಮ್ಯಾಂಡ್ ಇಟ್ಟ PDO ಒಬ್ಬರು ರೆಡ್ ಹ್ಯಾಂಡ್ ಆಗಿ ಲೋಕಾ ಬಲೆಗೆ ಬಿದ್ದಿರುವ ಘಟನೆ ಕಲಬುರಗಿಯಲ್ಲಿ ಜರುಗಿದೆ.
ಉತ್ತರ ಕರ್ನಾಟಕದ ಕುರಿತ ಚರ್ಚೆಗೆ ಹಾಗೂ ವಕ್ಫ್ ಮಂಡಳಿ ಕುರಿತು ಉತ್ತರ ನೀಡಲು ಸರ್ಕಾರ ಸಿದ್ಧವಿದೆ: CM ಸಿದ್ದರಾಮಯ್ಯ
ಲಂಚ ಪಡೆಯುವಾಗ ಕಲಬುರಗಿ ತಾಲ್ಲೂಕಿನ ಕವಲಗಾ ಬಿ ಪಂಚಾಯತಿ ಪಿಡಿಓ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಪ್ರೀತಿರಾಜ್ ಲೋಕಾ ಬಲೆಗೆ ಬಿದ್ದ PDO ಎಂದು ಹೇಳಲಾಗಿದೆ. ಕವಲಗಾ ಬಿ ಪಂಚಾಯತಿಯ ಪಂಪ್ ಆಪರೇಟರ್ ಗುರುಸಿದ್ದಯ್ಯ ಸ್ಥಾವರಮಠ ಬಳಿ 17 ಸಾವಿರ ಲಂಚವನ್ನು ಪೋನ್ ಪೇ ಮೂಲಕ ಪಡೆಯುವಾಗ ಲೋಕಾ ದಾಳಿ ನಡೆಸಿದೆ.
ಐದು ತಿಂಗಳ ವೇತನ ಪಾವತಿ ಸೇರಿ ಕರ್ತವ್ಯಕ್ಕೆ ಪುನಃ ನೇಮಕ ಮಾಡಿಕೊಳ್ಳಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಇಂದು ಅರೆಸ್ಟ್ ಆಗಿದ್ದಾರೆ.