ಬೆಂಗಳೂರು: ರಾಜ್ಯದಲ್ಲಿ ಬಿಯರ್ ಗೆ ಎಲ್ಲೆಲ್ಲದ ಡಿಮ್ಯಾಂಡ್ ಶುರುವಾಗಿದೆ. ಇದರ ಜೊತೆಗೆ ಲಿಕ್ಕರ್ ಸೇಲ್ ಫುಲ್ ಸಹ ಜೋರಿದೆ. ನವೆಂಬರ್ನಲ್ಲಿ ಬಿಯರ್ ಮಾರಾಟ ಪ್ರಮಾಣ ಹೆಚ್ಚಾಗಿದೆ. ಈ ಮೂಲಕ ಗ್ಯಾರಂಟಿಗಳನ್ನು ಜಾರಿಗೊಳಿಸಿದ ಸರ್ಕಾರಕ್ಕೆ ಮದ್ಯಪ್ರಿಯರು ಆರ್ಥಿಕವಾಗಿ ಕೈ ಜೋಡಿಸಿದ್ದಾರೆ.
ರಾಕಿಭಾಯ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ಡಿಸೆಂಬರ್ 8ಕ್ಕೆ ಮುಂದಿನ ಚಿತ್ರದ ಟೈಟಲ್ ಘೋಷಣೆ!
ರಾಜ್ಯದಲ್ಲಿ ವರ್ಷಾಂತ್ಯದ ವೇಳೆ ಬಿಯರ್, ಲಿಕ್ಕರ್ ಸೇಲ್ ಜೋರಿರುತ್ತೆ. ಮಧ್ಯಪ್ರಿಯರು ಡ್ರಿಂಕ್ಸ್ ಮಾಡ್ತಾ ನ್ಯೂ ಇಯರ್ ವೆಲ್ ಕಮ್ ಮಾಡ್ತಾರೆ. ಆದರೆ ಈ ವರ್ಷದ ಹೊಸ ವರುಷ ಬರುವ ಮುನ್ನವೇ ಬಿಯರ್, ಹಾಟ್ ಡ್ರಿಂಕ್ಸ್ ಸೇಲ್ ಹೆಚ್ಚಾಗಿದೆ. ಚಳಿಗಾಲ ಶುರುವಾಗ್ತಿದ್ದಂತೆ ರಾಜ್ಯದಲ್ಲಿ ಬಿಯರ್ ಗೆ ಭಾರೀ ಬೇಡಿಕೆ ಬಂದಿದೆ.
ತಿಂಗಳು ಬಿಯರ್ ಲಿಕ್ಕರ್(MSIL) ಮಾರಾಟ
ಏಪ್ರಿಲ್ ಶೇ. 4.75 – ಶೇ. 1.49
ಮೇ ಶೇ. 10 – ಶೇ. 7.20
ಜೂನ್ ಶೇ. 26.84 – ಶೇ. 3.99
ಜುಲೈ ಶೇ. 26.81 – ಶೇ. 20.64
ಆಗಸ್ಟ್ ಶೇ. 21.40 – ಶೇ.6.84
ಸೆಪ್ಟೆಂಬರ್ ಶೇ. 3.54 – ಶೇ. 0.24
ಅಕ್ಟೋಬರ್ ಶೇ.19.85 – ಶೇ. 0.03
ನವೆಂಬರ್ ಶೇ. 17.03 – ಶೇ.0.43