ಬೆಂಗಳೂರು:– ಲಂಚ ಸ್ವೀಕರಿಸುವಾಗ ಸಂಜಯ್ ನಗರ ASI ವಿಜಯ್ ಕುಮಾರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಆಟೋ ಚಾಲಕನಿಂದ 40 ಸಾವಿರ ಹಣ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಅಧಿಕಾರಿ ಸಿಕ್ಕಿಬಿದ್ದಿದ್ದಾರೆ.
ಹೋರಾಟಕ್ಕೂ ಮೊದಲು ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಲಿ: ಪ್ರಸಾದ ಅಬ್ಬಯ್ಯ!
ಮಧ್ಯವರ್ತಿ ಮೂಲಕ 50 ಸಾವಿರಕ್ಕೆ ವಿಜಯ್ ಕುಮಾರ್ ಬೇಡಿಕೆ ಇಟ್ಟಿದ್ದರು. ಅಲ್ಲದೇ ಸಂಜಯ್ ನಗರ ಪೊಲೀಸರು, ದೂರುದಾರನ ಆಟೋ ಜಪ್ತಿ ಮಾಡಿದ್ದರು. ಇದರ ಬಿಡುಗಡೆಗೆ ಮಧ್ಯವರ್ತಿ ಸೈಯದ್ ರಿಜ್ವಾನ್ ಮೂಲಕ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಈ ಬಗ್ಗೆ ಲೋಕಾಯುಕ್ತಕ್ಕೆ ಆಟೋ ಚಾಲಕ ದೂರು ನೀಡಿದ್ದರು. ದೂರಿನ್ವಯ ಇಂದು ಸಂಜೆ ದಾಳಿ ನಡೆಸಿ ಹಣ ಸ್ವೀಕರಿಸುವಾಗ ಲೋಕಾ ಅಧಿಕಾರಿಗಳು, ASI ವಿಜಯ್ ಕುಮಾರ್ ,ಮಧ್ಯವರ್ತಿ ರಿಜ್ವಾನ್ ಬಂಧಿಸಿದ್ದಾರೆ.
ಬಂಧಿಸಿ ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.