ಹಾವೇರಿ: 2ಎ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಡಿಸೆಂಬರ್ 10ರಂದು ಬೆಳಗ್ಗೆ 10ಗಂಟೆಗೆ ಬೆಳಗಾವಿಯ ಸುವರ್ಣ ಸೌಧಕ್ಕೆ ಸಾವಿರಾರು ಜನರು ಸೇರಿ ಮುತ್ತಿಗೆ ಹಾಕುತ್ತೇವೆ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
Bengaluru: ವಾಣಿಜ್ಯ ವ್ಯಾಪಾರಿಗಳಿಂದ ಪುಟ್ ಪಾತ್ ಅಕ್ರಮಣ: ತೆರವಿಗೆ ಅಗ್ರಹ!
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ಹೋರಾಟವನ್ನು ತೀವ್ರಗೊಳಿಸಲಾಗುತ್ತಿದೆ. ವಿಧಾನಸಭಾ ಅಧಿವೇಶನದ ವೇಳೆ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಯೋಜಿಸಲಾಗಿದೆ. ಡಿಸೆಂಬರ್ 10ರಂದು ಬೆಳಗ್ಗೆ 10ಗಂಟೆಗೆ ಬೆಳಗಾವಿಯ ಸುವರ್ಣ ಸೌಧಕ್ಕೆ ಸಾವಿರಾರು ಜನರು ಸೇರಿ ಮುತ್ತಿಗೆ ಹಾಕುತ್ತೇವೆ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ವಕೀಲರ ಪರಿಷತ್ ನೇತೃತ್ವದಲ್ಲಿ ಅಂದು ನಡೆಯುವ ಹೋರಾಟದಲ್ಲಿ ಪಂಚಮಸಾಲಿ ಸಮುದಾದಯ 15,000 ಜನರು ಪಾಲ್ಗೊಳ್ಳಲಿದ್ದಾರೆ ಎಂದು ಸ್ವಾಮೀಜಿಗಳು ತಿಳಿಸಿದ್ದಾರೆ.
ಲಿಂಗಾಯತರು ಮೀಸಲಾತಿ ಕೇಳಿದರೆ ನೀತಿ ಸಂಹಿತೆ ಉಲ್ಲಂಘನೆ ಎಂದನ್ನುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಎರಡು ತಾಸು ಸಭೆ ನಡೆಸಲಾಯಿತು. ಆದರೆ, ನೀತಿ ಸಂಹಿತೆ ಕಾರಣದಿಂದ ನಿರ್ಧಾರ ತೆಗೆದುಕೊಳ್ಳಲು ಆಗಲ್ಲ ಎಂದು ಸಿಎಂ ಹೇಳ್ತಾರೆ. ಲಿಂಗಾಯತರು ವೋಟು ಹಾಕಿಲ್ಲ ಎಂದು ಈ ರೀತಿ ಮಾಡುತ್ತಿದ್ದಾರೆ. ಪಂಚಮಸಾಲಿಗಳು ಬಹುಸಂಖ್ಯಾತರು ಇವರಿಗೆ ಮೀಸಲಾತಿ ಕೊಟ್ಟರೆ ಮುಂದುವರಿಯುತ್ತಾರೆ ಎಂಬ ಕಾರಣಕ್ಕೆ ಕೊಟ್ಟಿಲ್ಲ ಎಂದು ಅವರು ಕಿಡಿಕಾರಿದ್ದಾರೆ.