ದಾವಣಗೆರೆ:– 2 ಸಾವಿರ ಲಂಚ ಪಡೆಯುತ್ತಿದ್ದ ಕಾನ್ಸ್ಟೇಬಲ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ವಿಧಾನ ಪರಿಷತ್ ಚುನಾವಣೆ: ಕಮಲ ಅಭ್ಯರ್ಥಿಗಳ ಪಟ್ಟಿ ರಿಲೀಸ್… ಸಿಟಿ ರವಿಗೆ ಒಲಿದ ಅದೃಷ್ಟ.. !
ದಾವಣಗೆರೆ ಬಡಾವಣೆ ಪೊಲೀಸ್ ಠಾಣೆ ಪೇದೆ ಹನುಮಂತಪ್ಪ ಅವರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಲಕ್ಕಪ್ಪ ಅಂಗಡಿ ಎಂಬುವರು ಸೈಯದ್ ತಹಿರುದ್ದೀನ್ ಎಂಬುವರ ವಿರುದ್ಧ ನ್ಯಾಯಾಲಯದಲ್ಲಿ ಚೆಕ್ಬೌನ್ಸ್ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ಸೈಯದ್ ತಹಿರುದ್ದೀನ್ ಅವರ ವಿರುದ್ಧ ವಾರಂಟ್ ನೀಡುವಂತೆ ಪೊಲೀಸ್ ಪೇದೆ ಹನಮಂತಪ್ಪ ಅವರಿಗೆ ಲಕ್ಕಪ್ಪ ಅಂಗಡಿ ವಿನಂತಿಸಿದ್ದರು.
ವಾರಂಟ್ ಜಾರಿ ಮಾಡಲು ಲಕ್ಕಪ್ಪ ಅಂಗಡಿ ಅವರ ಬಳಿ ಪೊಲೀಸ್ ಪೇದೆ ಹನಮಂತಪ್ಪ ಪೋನ್ ಪೇ ಮೂಲಕ ಎರಡು ಸಾವಿರ ರೂ. ಬೇಡಿಕೆ ಪಡೆಯುತ್ತಿದ್ದರು. ಈ ವೇಳೆ ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂಎಸ್ ಕೌಲಾಪುರೆ ನೇತ್ರತ್ವದಲ್ಲಿ ದಾಳಿ ಮಾಡಿ ರೆಡ್ಹ್ಯಾಂಡ್ ಆಗಿ ಹಿಡಿದ್ದಾರೆ.