ಇಂಡಿಯನ್ ಪ್ರೀಮಿಯರ್ ಲೀಗ್ 17 ರ ಸೀಸನ್ ಇಂದಿನ ಪಂದ್ಯ ಚೆನ್ನೈ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಏರ್ಪಟ್ಟಿದೆ.
Rahul Gandhi: ಮ್ಯಾಚ್ ಫಿಕ್ಸಿಂಗ್ ಬಿಜೆಪಿ 400 ಸೀಟು ಗೆಲ್ಲಲು ಸಾಧ್ಯವಿಲ್ಲ – ರಾಹುಲ್ ಗಾಂಧಿ!
ಅದರಂತೆ ಟಾಸ್ ಗೆದ್ದ ಡೆಲ್ಲಿ ನಾಯಕ ರಿಷಬ್ ಪಂತ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಐಪಿಎಲ್ 2024 ರ ಡಬಲ್ ಹೆಡರ್ ದಿನದ ಎರಡನೇ ಪಂದ್ಯ ದೆಹಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯುತ್ತಿದೆ. ಇದು ಈ ಆವೃತ್ತಿಯ 13ನೇ ಪಂದ್ಯವಾಗಿದ್ದು, ವಿಶಾಖಪಟ್ಟಣಂ ಮೈದಾನದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಉಭಯ ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಕಂಡುಬರಲಿದೆ. ಈ ಸೀಸನ್ನಲ್ಲಿ ಮೊದಲ ಗೆಲುವಿನ ಹಂಬಲದಲ್ಲಿರುವ ಡೆಲ್ಲಿ ತಂಡ ಒಂದೆಡೆ ಇದ್ದರೆ, ಮತ್ತೊಂದೆಡೆ ಎರಡೂ ಪಂದ್ಯಗಳನ್ನು ಗೆಲ್ಲುತ್ತಿರುವ ಚೆನ್ನೈ ತಂಡವಿದೆ ಎನ್ನಲಾಗಿದೆ.