ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 106 ರನ್ ಅಂತರದಿಂದ ಕೊಲ್ಕತ್ತಾ ನೈಟ್ ರೈಡರ್ಸ್ ಹ್ಯಾಟ್ರಿಕ್ ಜಯ ಸಾಧಿಸಿದ್ದಾರೆ.
ಜತೆಗೆ ಅಂಕಪಟ್ಟಿಯಲ್ಲಿ 6 ಅಂಕ ಸಂಪಾದಿಸಿ ಅಗ್ರ ಸ್ಥಾನಕ್ಕೇರಿದೆ.
ರಾಘವೇಂದ್ರ ಚುನಾವಣೆಯಲ್ಲಿ ಸೋಲಲಿ ಎಂಬುವುದು ಅಮಿತ್ ಶಾ ಅಪೇಕ್ಷೆ – ಈಶ್ವರಪ್ಪ!
ಇಲ್ಲಿನ ಡಾ.ವೈ.ಎಸ್. ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕೆಕೆಆರ್ ಫುಲ್ ಜೋಶ್ನಲ್ಲಿ ಬ್ಯಾಟಿಂಗ್ ನಡೆಸಿ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ಗೆ ಬರೋಬ್ಬರಿ 272 ರನ್ ಬಾರಿಸಿತು. ಈ ಬೃಹತ್ ಮೊತ್ತವನ್ನು ಕಂಡು ಕಂಗಾಲಾದ ಡೆಲ್ಲಿ ಕ್ಯಾಪಿಟಲ್ಸ್ 17.2 ಓವರ್ಗಳಲ್ಲಿ 166 ರನ್ ಬಾರಿಸಿ ಸರ್ವಪತನ ಕಂಡಿತು.
ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿಗೆ ಆಸರೆಯಾದದ್ದು ನಾಯಕ ರಿಷಭ್ ಪಂತ್ ಮತ್ತು ಟ್ರಿಸ್ಟಾನ್ ಸ್ಟಬ್ಸ್. ಉಭಯ ಆಟಗಾರರು ಮಧ್ಯಮ ಕ್ರಮಾಂಕದಲ್ಲಿ ಕೆಲ ಕಾಲ ಹೊಡಿ-ಬಡಿ ಆಟವಾಡಿ ಅರ್ಧಶತಕ ಬಾರಿಸಿ ತಂಡ ಗೆಲುವಿವಾಗಿ ಶಕ್ತಿ ಮೀರಿ ಪ್ರಯತ್ನಿಸಿದರು. ಆದರೆ ಉಳಿದ ಆಟಗಾರರಿಂದ ಇದೇ ಪ್ರದರ್ಶನ ಕಂಡು ಬಾರದೆ ತಂಡ ಸೋಲು ಕಂಡಿತು. ಕಾರು ಅಪಘಾತದಿಂದ 14 ತಿಂಗಳು ಕ್ರಿಕೆಟ್ನಿಂದ ದೂರ ಉಳಿದಿದ್ದ ಪಂತ್ ಅವರು ತಮ್ಮ ಹಳೇಯ ಶೈಲಿಯ ಬ್ಯಾಟಿಂಗ್ ಪ್ರದರ್ಶನ ಮತ್ತೊಮ್ಮೆ ತೋರಿಸಿಕೊಟ್ಟರು.
ಕೇವಲ 23 ಎಸೆತಗಳಿಂದ ಅರ್ಧಶತಕ ಪೂರ್ತಿಗೊಳಿಸಿದ ಪಂತ್ ಮಧ್ಯಮ ವೇಗಿ ವೆಂಕಟೇಶ್ ಅಯ್ಯರ್ ಅವರ ಮೊದಲ ಓವರ್ನಲ್ಲಿ ಎಲ್ಲ ಎಸೆತಗಳನ್ನು ಸಿಕ್ಸರ್ ಮತ್ತು ಬೌಂಡರಿಗೆ ಬಡಿದಟ್ಟಿ 28 ರನ್ ಬಾರಿಸಿದರು. ಆದರೆ ಮುಂದಿನ ಓವರ್ನಲ್ಲಿ ವರಣ್ ಚರ್ಕವರ್ತಿಗೆ ವಿಕೆಟ್ ಒಪ್ಪಿಸಿದರು. 5 ಸಿಕ್ಸರ್ ಮತ್ತು 4 ಬೌಂಡರಿ ನೆರವಿನಿಂದ 55 ರನ್ ಗಳಿಸಿದರು. ಇವರ ಜತೆಗಾರ ಟ್ರಿಸ್ಟಾನ್ ಸ್ಟಬ್ಸ್ ತಲಾ 4 ಬೌಂಡರಿ ಮತ್ತು ಸಿಕ್ಸರ್ ನೆರವಿನಿಂದ 54 ರನ್ ಬಾರಿಸಿದರು. ಮಿಚೆಲ್ ಮಾರ್ಷ್, ಇಂಪ್ಯಾಕ್ಟ್ ಪ್ಲೇಯರ್ ಅಭಿಷೇಕ್ ಪೋರೆಲ್ ಮತ್ತು ಅಕ್ಷರ್ ಪಟೇಲ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ವಾರ್ನರ್ 18 ರನ್ ಗಳಿಸಿದರು.
ಕೆಕೆಆರ್ ಪರ ವೈಭವ್ ಅರೋರಾ ಮತ್ತು ವರುಣ್ ಚರ್ಕವರ್ತಿ ಘಾತಕ ಬೌಲಿಂಗ್ ನಡೆಸಿ ತಲಾ 3 ವಿಕೆಟ್ ಕಿತ್ತರು. 24.75 ಕೋಟಿ ವೀರ ಮಿಚೆಲ್ ಸ್ಟಾರ್ಕ್ ಅವರು ಈ ಪಂದ್ಯದಲ್ಲಿ ಗಮನಾರ್ಹ ಬೌಲಿಂಗ್ ಪ್ರದರ್ಶನ ತೋರುವ ಮೂಲಕ 2 ವಿಕೆಟ್ ಪಡೆದರು.