ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭಯಾನಕ ಕೊಲೆಯೊಂದು ಬೆಳಕಿಗೆ ಬಂದಿದೆ. ಕೊಲೆಯ ಭೀಕರತೆಗೆ ಬೆಂಗಳೂರಿನ ಜನ ಬೆಚ್ಚಿ ಬಿದ್ದಿದ್ದಾರೆ.ದೆಹಲಿಯಲ್ಲಿ ಮಾಡಲಾಗಿದ್ದ ಶ್ರದ್ಧಾ ಕೊಲೆಯ ಮಾದರಿ ಬೆಂಗಳೂರಿನಲ್ಲೂ ನಡೆಯುತ್ತಿರುವುದು ನಾಗರೀಕರು ನಡುಗುವಂತೆ ಮಾಡಿದೆ. ಈ ಬ್ರೂಟಲ್ ಮರ್ಡರ್ ನ ಡೀಟೇಲ್ಸ್ ತೋರಿಸ್ತೀವಿ ನೋಡಿ.. ಬೆಂಗಳೂರಿನಲ್ಲಿ ನೆಡೆದಿರುವ ಭಯಂಕರ ಕೊಲೆ ಪ್ರಕರಣವನ್ನು ಸಂಪಿಗೇಹಳ್ಳಿ ಪೊಲೀಸರು ಭೇದಿಸಿದ್ದಾರೆ… ಮಿಸ್ಸಿಂಗ್ ಆಗಿದ್ದ ವ್ಯೆಕ್ತಿಯ ಕೊಲೆಯಾಗಿ ಹೋಗಿದ್ದ. ಮಿಸ್ಸಿಂಗ್ ಲಿಂಕ್ ಅನ್ನು ಹುಡುಕುತ್ತಾ ಹೊರಟ ಸಂಪಿಗೆಹಳ್ಳಿ ಪೊಲೀಸರಿಗೆ ಶಾಕ್ ಕಾದಿತ್ತು. ಕೊನೆದಾಗಿ ಸ್ವಿಚ್ ಆಫ್ ಆಗಿದ ಸ್ಥಳಕ್ಕೆ ಹೋಗಿ ನೋಡಿದಾಗ ಮಿಸ್ಸಿಂಗ್ ವ್ಯಕ್ತಿ ಮರ್ಡರ್ ಆಗಿರೋದು ಪಕ್ಕಾ ಆಗಿತ್ತು.
ಈ ಫೋಟೋದಲ್ಲಿ ಕಾಣುತ್ತಿರುವ ವ್ಯಕ್ತಿ ಹೆಸರು ಕೆ ವಿ ಶ್ರೀನಾಥ್ ವಯಸ್ಸು 34 ವರ್ಷ. ಥಣಿಸಂದ್ರದ ಅಂಜನಾದ್ರಿ ಲೇಔಟ್ ನಿವಾಸಿಯಾದ ಕೆ.ವಿ. ಶ್ರೀನಾಥ್ ಬಸವೇಶ್ವರನಗರದಲ್ಲಿರುವ ಮಾರ್ಗದರ್ಶಿ ಚಿಟ್ ಫಂಡ್ನಲ್ಲಿ ಡೆವಲಪ್ಮೆಂಟ್ ಆಫೀಸರ್ ಆಗಿದ್ದ. ಕಳೆದ ಮೇ.28ರ ಬೆಳಗ್ಗೆ ಮನೆಯಿಂದ ಹೊರಹೋಗಿದ್ದ ಶ್ರೀನಾಥ್ ವಾಪಸ್ ಆಗಿರಲಿಲ್ಲ. ಇದರಿಂದ ಹೆದರಿದ ಶ್ರೀನಾಥ್ ಪತ್ನಿ ಮೇ.29ರಂದು ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು.
![Demo](https://ainlivenews.com/wp-content/uploads/2023/12/spoorthi-1.jpg)
ದೂರು ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಕೆ.ವಿ.ಶ್ರೀನಾಥ್ ಮೇ.28ರಂದು ಆರೋಪಿ ಮಾಧವರಾವ್ ಮನೆಗೆ ಹೋಗಿದ್ದು ಗೊತ್ತಾಗಿತ್ತು. ಕೆ.ಆರ್.ಪುರಂನ ವಿಜಿನಪುರದಲ್ಲಿರುವ ಮಾಧವರಾವ್ ಮನೆಗೆ ಶ್ರೀನಾಥ್ ಹೋಗುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆದರೆ ಒಳಗೆ ಹೋದವನು ಹೊರಗೆ ಬಂದಿರಲಿಲ್ಲ. ಜತೆಗೆ ಮನೆಯ ಒಳಗಡೆ ಪರಿಶೀಲನೆ ಮಾಡಿದಾಗ ರಕ್ತದ ಕಲೆಗಳು ಪತ್ತೆಯಾಗಿದ್ವು. ಮಾಧವರಾವ್ ಬಗ್ಗೆ ಅಕ್ಕ ಪಕ್ಕದಲ್ಲಿ ವಿಚಾರಿಸಿದಾಗ ಆತನೂ ನಾಪತ್ತೆಯಾಗಿದ್ದ.ಬಳಿಕ ಆತನ ಮೊಬೈಲ್ ಲೋಕೇಶನ್ ಪತ್ತೆ ಮಾಡಿದ ಪೊಲೀಸರಿಗೆ ಆರೋಪಿ ಆಂಧ್ರಪ್ರದೇಶದಲ್ಲಿ ಇದ್ದಾನೆ ಎಂದು ಗೊತ್ತಾಗಿತ್ತು. ನಂತರ ಮಾಧವರಾವ್ನನ್ನು ಕರೆತಂದು ಪೊಲೀಸರು ವಿಚಾರಣೆಯನ್ನು ನಡೆಸಿದಾಗ ಅಸಲಿ ಕಥೆಯನ್ನು ತೆರೆದಿಟ್ಟಿದ್ದ.
Muskmelon Seeds: ಕರ್ಬೂಜ ಹಣ್ಣಿನ ಬೀಜಗಳಿಂದ ಎಷ್ಟೆಲ್ಲಾ ಅದ್ಭುತ ಪ್ರಯೋಜನಗಳಿವೆ ಗೊತ್ತಾ..?
ಮಾಧವರಾವ್ ಮತ್ತು ಕೆ.ವಿ.ಶ್ರೀನಾಥ್ ಇಬ್ಬರು ಎರಡು ವರ್ಷದಿಂದ ಪರಿಚಯಸ್ಥರಾಗಿದ್ರು. ಕೆ.ವಿ.ಶ್ರೀನಾಥ್ ಬಳಿ ಮಾಧವರಾವ್ 5 ಲಕ್ಷ ರೂ. ಹಣದ ಚೀಟಿ ಹಾಕಿದ್ದ. ಈ ಚೀಟಿ ಹಣದ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಆಗಿತ್ತು. ಚೀಟಿ ಹಣ ಕೊಡುವಂತೆ ಶ್ರೀನಾಥ್ ಒತ್ತಾಯ ಮಾಡುತ್ತಿದ್ದ. ಅಷ್ಟಲ್ಲದೇ ಮಾಧವರಾವ್ ಪತ್ನಿ ಜತೆ ಶ್ರೀನಾಥ್ ಅಕ್ರಮ ಸಂಬಂಧವನ್ನು ಹೊಂದಿದ್ದ ಎನ್ನಲಾಗಿದೆ. ಮೇ 28ರಂದು ಬೆಳಗ್ಗೆ ಮಾಧವರಾವ್ ಮನೆಗೆ ಶ್ರೀನಾಥ್ ಬಂದಿದ್ದ.
ಈ ವೇಳೆ ಮನೆಯಲ್ಲಿ ಇಬ್ಬರಿಗೂ ಹಣದ ವಿಚಾರಕ್ಕೆ ಗಲಾಟೆ ಆಗಿತ್ತು. ಗಲಾಟೆ ವಿಕೋಪಕ್ಕೆ ತಿರುಗಿ ಸಿಟ್ಟಿನಲ್ಲಿ ಮಾಧವರಾವ್ ಮನೆಯಲ್ಲಿದ್ದ ಜಾಕ್ ರಾಡ್ನಿಂದ ಶ್ರೀನಾಥ್ ತಲೆಗೆ ಹೊಡೆದಿದ್ದ. ಕುಸಿದು ಬಿದ್ದ ಶ್ರೀನಾಥ್ನ ದೇಹವನ್ನು ಮಚ್ಚಿನಿಂದ ತುಂಡು ತುಂಡಾಗಿ ಕತ್ತರಿಸಿದ್ದ.ಬಳಿಕ ಶ್ರೀನಾಥ್ನ ಮೃತದೇಹವನ್ನು ಮೂರು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿದ್ದ. ಮೊದಲಿಗೆ ಒಂದು ಬ್ಯಾಗ್ ನಂತರ ಎರಡು ಬ್ಯಾಗ್ಗಳಲ್ಲಿ ಮೃತದೇಹದ ತುಂಡುಗಳನ್ನು ತುಂಬಿಕೊಂಡು ಬೆಳತ್ತೂರು ಬಳಿಯ ಮೋರಿಯಲ್ಲಿ (ಪಿನಾಕಿನಿ ನದಿ) ಹಾಕಿದ್ದಾನೆ. ನಂತರ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಆಂಧ್ರಪ್ರದೇಶಕ್ಕೆ ಎಸ್ಕೇಪ್ ಆಗಿದ್ದ.
ಸದ್ಯ ಕೊಲೆ ಪ್ರಕರಣವನ್ನು ರಾಮಮೂರ್ತಿನಗರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ರಾಮಮೂರ್ತಿನಗರ ಪೊಲೀಸರು ಕೊಲೆ ಮತ್ತು ಸಾಕ್ಷಿ ನಾಶದಡಿ ಕೇಸ್ ದಾಖಲು ಮಾಡಿಕೊಂಡು, ಶ್ರೀನಾಥ್ ಮೃತದೇಹದ ತುಂಡುಗಳಿಗೆ ಕಳೆದ ಮೂರು ದಿನದಿಂದ ಹುಡುಕಾಡುತ್ತಿದ್ದಾರೆ. ಸದ್ಯಕ್ಕೆ ಮೋರಿಯಲ್ಲಿ ಮೃತದೇಹದ ತುಂಡುಗಳು ಕೊಚ್ಚಿಕೊಂಡು ಹೋಗಿರುವ ಸಾಧ್ಯತೆ ಇದ್ದು, ಮಂಗಳೂರಿನಿಂದ ನುರಿತರನ್ನು ಕರೆಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿದು ಬಂದಿದೆ. ಒಟ್ಟಿನಲ್ಲಿ ಬೆಂಗಳೂರಿನಲ್ಲೂ ಬ್ರೂಟಲ್ ಮರ್ಡರ್ಗಳು ವರದಿಯಾಗುತ್ತಿದ್ದು ನಾಗರೀಕರು ಬೆಚ್ಚಿಬೀಳುವಂತೆ ಮಾಡಿದೆ. ಸದ್ಯ ಆರೋಪಿಯನ್ನು ತೀವ್ರ ವಿಚಾರಣೆಗೆ ನೆಡೆಸುತ್ತಿರುವ ಪೊಲೀಸರು ಮೃತದೇಹದ ತುಂಡುಗಳಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ..
![](https://ainlivenews.com/wp-content/uploads/2024/01/Ad-Banner-copy-scaled.jpg)