ಭಾರತೀಯ ಅಂಚೆ ಪೇಮೆಂಟ್ ಬ್ಯಾಂಕ್ʼನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ ಇನ್ಫರ್ಮೇಷನ್ ಟೆಕ್ನಾಲಜಿ ಎಕ್ಸಿಕ್ಯೂಟಿವ್ ಹುದ್ದೆ ಇದಾಗಿದ್ದು, ಒಟ್ಟು 54 ಸ್ಥಾನಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ.
ಉದ್ಯೋಗಬ್ಯಾಂಕ್ : ಭಾರತೀಯ ಅಂಚೆ ಪೇಮೆಂಟ್ ಬ್ಯಾಂಕ್
ಹುದ್ದೆಹೆಸರು : ಇನ್ಫರ್ಮೇಷನ್ ಟೆಕ್ನಾಲಜಿ ಎಕ್ಸಿಕ್ಯೂಟಿವ್ ಹುದ್ದೆಹುದ್ದೆಗಳಸಂಖ್ಯೆ : 54
ವಯೋಮಿತಿ ಅರ್ಹತೆ
ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಬಿಸಿಎ, ಬಿ.ಎಸ್ಸಿ, ಬಿ.ಇ. ಅಥವಾ ಬಿ.ಟೆಕ್, ಎಂಸಿಎ ಪದವಿ ಪಡೆದಿರಬೇಕು. ಜತೆಗೆ 1ರಿಂದ 6 ವರ್ಷದವರೆಗೆ ಅನುಭವ ಹೊಂದಿರುವುದು ಕಡ್ಡಾಯ.
ಅಭ್ಯರ್ಥಿಗಳ ಕನಿಷ್ಠ ವಯಸ್ಸು 22 ವರ್ಷ ಮತ್ತು ಗರಿಷ್ಠ ವಯಸ್ಸು 45 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್ಸಿ / ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ 10 ವರ್ಷಗಳ ಸಡಿಲಿಕೆ ಇದೆ.
ಆಯ್ಕೆ ಪ್ರಕ್ರಿಯೆ ಹೇಗೆ? ಮತ್ತು ಮಾಸಿಕ ವೇತನ
ಆನ್ಲೈನ್ ಪರೀಕ್ಷೆ, ಗ್ರೂಪ್ ಡಿಸ್ಕಷನ್ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಗುತ್ತಿಗೆ ಆಧಾರದಲ್ಲಿ ಈ ನೇಮಕಾತಿ ನಡೆಯಲಿದ್ದು, ಆಯ್ಕೆಯಾದವರಿಗೆ 10,00,000 ರೂ.-25,00,000 ರೂ. ವಾರ್ಷಿಕ ವೇತನ ದೊರೆಯಲಿದೆ.
ಅರ್ಜಿ ಸಲ್ಲಿಕೆ ವಿಧಾನ
- ಮೊದಲು ನಿಮ್ಮ ಹೆಸರು ನೋಂದಾಯಿಸಿ.
- ಪಾಸ್ವರ್ಡ್ ಬಳಸಿ ಲಾಗಿನ್ ಆಗಿ.
- ಈಗ ತೆರೆದುಕೊಳ್ಳುವ IPPB Online Application Form ಅನ್ನು ಸರಿಯಾದ ಮಾಹಿತಿ ನೀಡಿ ಭರ್ತಿ ಮಾಡಿ.
- ಅಗತ್ಯವಾದ ಡಾಕ್ಯುಮೆಂಟ್, ಫೋಟೊ, ಸಹಿ ಇತ್ಯಾದಿಯನ್ನು ಸರಿಯಾದ ಗಾತ್ರದಲ್ಲಿ ಅಪ್ಲೋಡ್ ಮಾಡಿ.
- ಆನ್ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಿ.
- ನೀಡಿದ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿಯಾಗಿದ್ದರೆ Submit ಬಟನ್ ಕ್ಲಿಕ್ ಮಾಡಿ.
- ಅಪ್ಲಿಕೇಷನ್ ನಂಬರ್ ಅಥವಾ ರಿಕ್ವೆಸ್ಟ್ ನಂಬರ್ ನೋಟ್ ಮಾಡಿಟ್ಟುಕೊಳ್ಳಿ.