ರಾಮನಗರ:- ರಾಮನಗರದಲ್ಲಿ 7 ವರ್ಷದಲ್ಲಿ ಕಾಡಾನೆ ದಾಳಿಗೆ 38ಕ್ಕೂ ಹೆಚ್ಚು ಜನರು ಬಲಿ ಆಗಿದ್ದಾರೆ ಎಂದು ಸದನದಲ್ಲಿ ಕಾಂಗ್ರೆಸ್ ಸದಸ್ಯ ರವಿ ವಿಷಯ ಪ್ರಸ್ತಾಪಿಸಿದ್ದಾರೆ.
ಇದುವರೆಗೆ ಕಾಡಾನೆ ದಾಳಿಯಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಕೃಷಿ ಕೆಲಸಕ್ಕೆ ಹೋದ ರೈತರು ಮನೆಗೆ ಹಿಂದಿರುಗುವ ನಂಬಿಕೆಯಿಲ್ಲ. ಪ್ರತಿನಿತ್ಯ ಕಾಡಾನೆ ಸಮಸ್ಯೆ ಹೆಚ್ಚಳವಾಗುತ್ತಿದೆ. ಭೀತಿಯಿಂದ ಅದೆಷ್ಟೋ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಈ ಹಿನ್ನಲೆ ಕಾಡಾನೆ ನಿಯಂತ್ರಿಸುವಂತೆ ಜನರು ನಮಗೆ ಒತ್ತಾಯ ಮಾಡುತ್ತಿದ್ದಾರೆ ಎಂದರು.
![Demo](https://ainlivenews.com/wp-content/uploads/2023/12/spoorthi-1.jpg)
ಇದಕ್ಕೆ ಉತ್ತರಿಸಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ, ‘ ಈ ವರ್ಷ ಪ್ರಾಣಿ ದಾಳಿಯಿಂದ 55 ಮಂದಿ ಸಾವನ್ನಪ್ಪಿದ್ದಾರೆ. ಬನ್ನೇರುಘಟ್ಟ ಅರಣ್ಯ ವ್ಯಾಪ್ತಿಯಿಂದ ಆನೆಗಳು ರಾಮನಗರ, ಕನಕಪುರ ಭಾಗಕ್ಕೆ ಬರುತ್ತಿದ್ದಾವೆ. ಆನೆಗಳು ಅರಣ್ಯ ಪ್ರದೇಶದಿಂದ ಹೊರಗೆ ಬರದಂತೆ ಏನು ಕ್ರಮ ಕೈಗೊಳ್ಳಬೇಕೆಂದು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದರು.
![](https://ainlivenews.com/wp-content/uploads/2024/01/Ad-Banner-copy-scaled.jpg)