ಚಾಮರಾಜನಗರ: ಮಳೆ ಇಲ್ಲದೆ ಬೆಳೆದ ಬೆಳೆ ಉಳಿಸಿಕೊಳ್ಳಲು ರೈತರು ಪರದಾಡುತ್ತಿರುವ ಈ ಸಂಧರ್ಭದಲ್ಲಿ ಕಾಡಾನೆಗಳ ದಾಳಿಯಿಂದ ಬೆಳೆಗಳು ನಾಶವಾಗುತ್ತಿರುವುದನ್ನು ವಿರೋಧಿಸಿ ಬಂಡೀಪುರದಲ್ಲಿ ರೈತರು ಪ್ರತಿಭಟನೆ ನಡೆಸಿದರು.
ವಾ.ಓ: ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಚಿತ ಅರಣ್ಯ ಪ್ರದೇಶದ ಹಂಗಳ ಗ್ರಾಮದಲ್ಲಿ ಪ್ರತಿನಿತ್ಯ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಬೆಳೆ ನಾಶದ ಆತಂಕದಲ್ಲಿ ರೈತರು ಪ್ರತಿನಿತ್ಯ ಪರದಾಡುವಂತಾಗಿದೆ. ಹಾಗಾಗಿ ಆತಂಕಕ್ಕೆ ಒಳಗಾದ ರೈತರಿಂದ ಬಂಡೀಪುರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದ ರೈತರು ಬಂಡೀಪುರದಲ್ಲಿ ಸಮಾವೇಶಗೊಂಡು ಬೆಳೆ ನಾಶ ಪಡಿಸುತ್ತಿರುವ ಪುಂಡಾನೆಯನ್ನು ಸೆರೆ ಹಿಡಿಯುವಂತೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಹಂಗಳ ಗ್ರಾಮದ ಜಮೀನುಗಳಿಗೆ ರಾತ್ರಿ ವೇಳೆಯಲ್ಲಿ ಲಗ್ಗೆ ಇಡುತ್ತಿರುವ ಕಾಡಾನೆಗಳು ವಷ೮ ಪೂರ್ತಿ ಬೆಳೆದ ಬೆಳೆಗಳನ್ನು ಪುಂಡಾನೆಯು ದಾಳಿ ನಡೆಸಿ ರೈತರಿಗೆ ನಷ್ಟ ಉಂಟುಮಾಡಿ ಆತಂಕ ಸೃಷ್ಟಿಸಿದೆ . ಸತತ ದಾಳಿಯಿಂದ ರೋಷಿ ಹೋಗಿರುವ ಕಾಡಂಚಿನ ರೈತರು ಬಂಡೀಪುರದಲ್ಲಿ ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ದ ಆಕ್ರೋಶ ಹೊರಹಾಕಿದ ಘಟನೆ ನಡೆಯಿತು. ಈ ವೇಳೆ ಮಾತನಾಡಿದ ಹಂಗಳ ಗ್ರಾಮದ ರೈತ ಬಸವಣ್ಣ ದಾಳಿ ನಡೆಸುತ್ತಿರುವ ಪುಂಡಾನೆಯನ್ನು ಕೂಡಲೆ ಹಿಡಿದು ಬೆಳೆಹಾನಿಗೊಳಗಾದ ರೈತರಿಗೆ ಪರಿಹಾರ ನೀಡುವಂತೆ ರೈತರ ಒತ್ತಾಯಿಸಿದ್ದಾರೆ.