ಉತ್ತರ ಪ್ರದೇಶ:- ಅಮೇಥಿಯಲ್ಲಿ ನನ್ನ ಸೇವೆ ಮುಂದುವರೆಯುತ್ತೆ ಎಂದು ಸೋಲಿನ ಬಳಿಕ ಸ್ಮೃತಿ ಇರಾನಿ ಹೇಳಿದ್ದಾರೆ.
ಸುಧಾಕರ್ ಭರ್ಜರಿ ಗೆಲುವು… ಪ್ರದೀಪ್ ಈಶ್ವರ್ ಮನೆ ಮೇಲೆ ಕಲ್ಲು ತೂರಾಟ…!
ಇದು ಗೆದ್ದವರನ್ನು ಅಭಿನಂದಿಸುವ ಸಮಯ, ನಾನು ಅಮೇಥಿಯಲ್ಲಿ ನನ್ನ ಸೇವೆಯನ್ನು ಮುಂದುವರೆಸುತ್ತೇನೆ ಎಂದರು.
ಕ್ಷೇತ್ರ ಮತ್ತು ಪಕ್ಷದ ಸೇವೆಯಲ್ಲಿ ಅತ್ಯಂತ ಸಮರ್ಪಣೆ ಮತ್ತು ನಿಷ್ಠೆಯಿಂದ ದುಡಿದ ಬಿಜೆಪಿ ಪಕ್ಷದ ಎಲ್ಲಾ ಕಾರ್ಯಕರ್ತರು ಮತ್ತು ಬೆಂಬಲಿಗರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಇಂದು, ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಯೋಗಿ ಆದಿತ್ಯನಾಥ್ ಅವರ ಸರ್ಕಾರಗಳು 30 ವರ್ಷಗಳ ಬಾಕಿ ಉಳಿದಿರುವ ಕೆಲಸಗಳನ್ನು ಕೇವಲ 5 ವರ್ಷಗಳಲ್ಲಿ ಪೂರ್ಣಗೊಳಿಸಿದ್ದಕ್ಕಾಗಿ ನಾನು ಅವರಿಗೆ ಆಭಾರಿಯಾಗಿದ್ದೇನೆ ಎಂದು ಹೇಳಿದರು. ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ಅವರು ಉತ್ತರ ಪ್ರದೇಶದ ನೆಹರೂ-ಗಾಂಧಿ ಕುಟುಂಬದ ಭದ್ರಕೋಟೆಯಾದ ಅಮೇಥಿಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು 1.67 ಲಕ್ಷ ಮತಗಳ ಅಂತರದಿಂದ ಸೋಲಿಸುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ.
ಚುನಾವಣಾ ಆಯೋಗದ ಪ್ರಕಾರ, ಇರಾನಿ 3,72,032 ಮತಗಳನ್ನು ಪಡೆದರೆ, ಶರ್ಮಾ 5,39,228 ಮತಗಳನ್ನು ಪಡೆದರು. ಬಿಎಸ್ಪಿ ಅಭ್ಯರ್ಥಿ 34,534 ಮತಗಳನ್ನು ಪಡೆದಿದ್ದಾರೆ.