ಜೊಮೆಟೋ ಫುಡ್ ಡೆಲಿವರಿ ಆ್ಯಪ್ ಸಿಇಒ ದೀಪಿಂದರ್ ಗೋಯಲ್ 2ನೇ ಮದುವೆಯಾಗಿದ್ದಾರೆ. 41 ವರ್ಷದ ಗೊಯೆಲ್ ಮೆಕ್ಸಿಕೋ ಮಾಡೆಲ್, ಉದ್ಯಮಿ ಗ್ರೇಸಿಯಾ ಮುನೋಜ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂದು ವರದಿಗಳು ಹೇಳುತ್ತಿದೆ. ಇತ್ತೀಚೆಗೆ ಸಸ್ಯಾರಿ ಫ್ಲೀಟ್ ಡೆಲಿವರಿ ಆರಂಭಿಸಿ ಭಾರಿ ಸಂಚಲನ ಸೃಷ್ಟಿಸಿದ ದೀಪಿಂದರ್ ಗೋಯಲ್ ಸೈಲೆಂಟ್ ಆಗಿ 2ನೇ ಮದುವೆ ಮಾಡಿಕೊಂಡಿದ್ದಾರೆ.
ಇದೀಗ ಈ ಮಾಹಿತಿ ಹೊರಬಂದಿದೆ. ದೀಪಿಂದರ್ ಗೋಯಲ್ ಇದಕ್ಕೂ ಮೊದಲು ಕಂಚನಾ ಜೋಶಿ ಎನ್ನುವವರನ್ನು ಮದುವೆಯಾಗಿದ್ದರು. ಇದೀಗ ಮೆಕ್ಸಿಕೊದ ರೂಪದರ್ಶಿಯನ್ನು ಎರಡನೇ ಮದುವೆಯಾಗಿದ್ದಾರೆ.
ರಹಸ್ಯ ಮದುವೆ: ದೀಪಿಂದರ್ ಐಐಟಿಯಲ್ಲಿ ಓದುವಾಗಲೇ ಕಂಚನಾ ಎಂಬುವರನ್ನು ಮದುವೆಯಾಗಿದ್ದು, ಪ್ರತ್ಯೇಕಗೊಂಡಿದ್ದರು. ಇದೀಗ ಎರಡನೇ ಮದುವೆಯನ್ನು ಗೌಪ್ಯವಾಗಿ ಆಗಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಿಂದ ಈ ಮಾಹಿತಿ ಬಹಿರಂಗವಾಗಿದೆ.
ಯಾರು ಈ ಗ್ರೇಸಿಯಾ : ಅವರ ಸಾಮಾಜಿಕ ಜಾಲತಾಣದ ಬಯೋ ಅನುಸಾರ ಗ್ರೆಸಿಯಾ ಮೆಕ್ಸಿಕೊದಲ್ಲಿ ಹುಟ್ಟಿದ್ದಾರೆ. ರೂಪದರ್ಶಿಯಾಗಿರುವ ಅವರು, 2022ರ ಮೆಟ್ರೊಪಾಲಿಟನ್ ಫ್ಯಾಷನ್ ವೀಕ್ನ ವಿನ್ನರ್ ಆಗಿದ್ದಾರೆ. ಬಳಿಕ ಮಾಡೆಲಿಂಗ್ ತೊರೆದು ಸ್ಟಾರ್ಟ್ ಅಪ್ ಆರಂಭಿಸಿದ್ದು, ಸದ್ಯ ಅವರು ಇದೇ ವೃತ್ತಿ ಮುಂದುವರೆಸಿದ್ದಾರೆ.
ಸದ್ಯ ಗ್ರೇಸಿಯಾ ಭಾರತದಲ್ಲಿದ್ದು, ದೆಹಲಿಗೆ ಆಗಮಿಸಿದ್ದು, ಕೆಲವು ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿದ್ದು, ಈ ಫೋಟೊಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವೇಳೆ, ಅವರು ನನ್ನ ಹೊಸ ಮನೆ, ನನ್ನ ಹೊಸ ಜೀವನ ಎಂದು ಬರೆದುಕೊಂಡಿದ್ದಾರೆ.
ಜೊಮಾಟೊ ಸಂಸ್ಥಾಪಕ: ಐಐಟಿಯಲ್ಲಿ ವಿದ್ಯಾಭ್ಯಾಸ ಮುಗಿಸಿದ ದೀಪಿಂದರ್ ಕನ್ಸಲ್ಟಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಬಳಿಕ 2008ರಲ್ಲಿ ಗುರುಗ್ರಾಮ್, ಹರ್ಯಾಣ,ದಲ್ಲಿ ಜೊಮೊಟೊವನ್ನು ಆರಂಭಿಸಿದರು. ಇಂದು ಜೊಮಾಟೊ ದೇಶದೆಲ್ಲೆಡೆ ಸಾವಿರಾರು ನಗರದಲ್ಲಿ ಸೇವೆ ಒದಗಿಸುತ್ತಿದೆ.