ಬಾಲಿವುಡ್ ನಟ ರಣ್ವೀರ್ ಸಿಂಗ್ ಹಾಗೂ ನಟಿ ದೀಪಿಕಾ ಪಡುಕೋಣೆ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗೆ ರಣ್ ವೀರ್ ಮದುವೆ ಫೋಟೋಗಳನ್ನು ಡಿಲೀಟ್ ಮಾಡಿ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಈ ಮಧ್ಯೆ ದಂಪತಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಳ್ಳುವ ಮೂಲಕ ಗಾಸಿಪ್ಗಳಿಗೆ ತೆರೆ ಎಳೆದಿದ್ದಾರೆ. ಈ ಮಧ್ಯೆ ದೀಪಿಕಾ ಫೋಟೋ ತೆಗೆಯಲು ಬಂದ ಕ್ಯಾಮೆರಾಗೆ ಪಂಚ್ ನೀಡಿದ್ದು ಮೊಬೈಲ್ ಕಿತ್ತೆಸೆದಿದ್ದಾರೆ.
ದೀಪಿಕಾ ಅವರ ಬೇಬಿ ಬಂಪ್ ಲುಕ್ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ. ಆದರೆ ನಟಿ ಲೂಸ್ ಡ್ರೆಸ್ ಹಾಕಿ ನಡೆದುಬರುತ್ತಿದ್ದರಿಂದ ಅದು ಸಾಧ್ಯವಾಗಿಲ್ಲ. ಈ ವೇಳೆ ಅಭಿಮಾನಿಯೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ನಟಿಯ ಫೋಟೋ ತೆಗೆಯಲು ಮುಂದಾಗಿದ್ದಾರೆ.
ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಸೆಲೆಬ್ರಿಟಿಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಂದಾಗುತ್ತಾರೆ. ಆದರೆ ಇದರಿಂದ ಸೆಲೆಬ್ರಿಟಿಗಳಿಗೆ ಕಿರಿಕಿರಿ ಆಗೋದು ಸಹಜ. ಅಭಿಮಾನಿಯೊಬ್ಬರು ನಟಿಯ ಫೋಟೋ ತೆಗೆಯಲು ಮುಂದಾದ ವೇಳೆ ಕೋಪಗೊಂಡ ನಟಿ ಕ್ಯಾಮೆರಾಗೆ ಪಂಚ್ ನೀಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.