ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಸದ್ಯ ಮಗಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಮಗು ಹುಟ್ಟಿ ನಾಲ್ಕು ತಿಂಗಳು ಕಳೆದಿದ್ದರು ಇದುವರೆಗೂ ಮುಗುವಿನ ಮುಖ ರಿವೀಲ್ ಮಾಡಿದೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ದೀಪಿಕಾ ಪಡುಕೋಣೆ ಅವರ ಫ್ಯಾಮಿಲಿ ಫೊಟೋ ಒಂದು ಸಖತ ವೈರಲ್ ಆಗುತ್ತಿದೆ.
ವೈರಲ್ ಆಗಿರುವ ಫೋಟೋ ಕ್ರಿಸ್ಮಸ್ ಸ್ಪೆಷಲ್ ಫೊಟೋಶೂಟ್ ಆಗಿದ್ದು ದೀಪಿಕಾ ಹಾಗೂ ರಣವೀರ್ ಮುದ್ದು ಮಗಳೊಂದಿಗೆ ಕ್ಯಾಮೆರಾಗೆ ಫೋಸ್ ಕೊಟ್ಟಿದ್ದಾರೆ.
ಅಂದ ಹಾಗೆ ಇದು ಒರಿಜಿನಲ್ ಫೋಟೋ ಅಲ್ಲ. ಬದಲಾಗಿ ಇದು ಎಐ ಜನರೇಟೆಡ್ ಫೋಟೋಗಳಾಗಿವೆ. ಈ ಫೋಟೋಗಳಲ್ಲಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಅವರ ಜೊತೆ ಅವರ ಮಗುವನ್ನು ಕೂಡಾ ಚಿತ್ರಿಸಲಾಗಿದೆ. ಇದನ್ನು ನೋಡಿ ತಟ್ಟನೆ ನೆಟ್ಟಿಗರು ಇದು ದೀಪಿಕಾ ಅವರ ಮಗಳು ದುವಾ ಪಡುಕೋಣೆಯಾ ಎಂದು ಅಚ್ಚರಿ ಪಟ್ಟಿದ್ದಾರೆ.
ಸದ್ಯ ದೀಪಿಕಾ ಎತ್ತಿ ಮುದ್ದಾಡುತ್ತಿರುವ ಮಗು ದುವಾ ಪಡುಕೋಣೆ ಅಲ್ಲ. ನಟಿ ದೀಪಿಕಾ ಪಡುಕೋಣೆ ಅವರು ಇದುವರೆಗೂ ಮಗಳ ಮುಖವನ್ನು ರಿವೀಲ್ ಮಾಡಿಲ್ಲ. ಬದಲಾಗಿ ಇದು ಎಐ ಜನರೇಟ್ ಮಾಡಿರುವ ಫೋಟೋ ಆಗಿದ್ದು ಇದರಲ್ಲಿ ದೀಪಿಕಾ ಅವರ ಪತಿ ಹಾಗೂ ಮಗಳನ್ನು ಚಿತ್ರಿಸಲಾಗಿದೆ.
ದೀಪಿಕಾ ಪಡುಕೋಣೆ ಹಾಗೂ ಅವರ ಮಗಳ ಫೋಟೋವನ್ನು ಜನರೇಟ್ ಮಾಡಲಾಗಿದ್ದು ಇದರಲ್ಲಿ ಆಕರ್ಷಕವಾದ ಕೆಂಬಣ್ಣದ ಉಡುಪಿನ ಮೇಲೆ ಹಸಿರು ಪ್ರಿಂಟ್ ಇರುವ ಡ್ರೆಸ್ ಧರಿಸಿದ್ದರು. ಇದು ಎಐ ಫೋಟೋ ಆಗಿದ್ದರೂ ಕೂಡಾ ತುಂಬಾ ಲವ್ಲೀ ಆಗಿ ಮೂಡಿ ಬಂದಿದೆ. ಇದನ್ನು ನೋಡಿದ ನೆಟ್ಟಿಗರು ನಿಜವಾದ ರಿಯಲ್ ಫೋಟೋ ಯಾವಾಗ ಬರುತ್ತದೋ ಎಂದು ಕಾಯುತ್ತಿದ್ದಾರೆ.
ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮೂರು ತಿಂಗಳ ಬಳಿಕ ಮಗಳು ದುವಾ ಪಡುಕೋಣೆ ಸಿಂಗ್ಳನ್ನು ಪಾಪರಾಜಿಗಳಿಗೆ ಪರಿಚಯಿಸಿದ್ದಾರೆ. ಪಾಪರಾಜಿಗಳಿಗಾಗಿ ವಿಶೇಷವಾದ ಕಾರ್ಯಕ್ರಮವನ್ನು ಹಮ್ಮಿಕೊಂಡು, ಈ ಸಮಯದಲ್ಲಿ ಅವರು ಮಗಳನ್ನು ಪರಿಚಯಿಸಿದ್ದಾರೆ. ಅದೇ ರೀತಿ ಮಗಳ ಫೋಟೋಗಳನ್ನು ತೆಗೆದುಕೊಳ್ಳದಂತೆ ಛಾಯಾಗ್ರಾಹಕರನ್ನು ವಿನಂತಿಸಿದ್ದರು.
ಮಗಳು ದುವಾ ಆಗಮನವನ್ನು ಆಚರಿಸಲು ಛಾಯಾಗ್ರಾಹಕರನ್ನು ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರ ಕ್ಲಬ್ಹೌಸ್ಗೆ ಆಹ್ವಾನಿಸಲಾಗಿದೆ ಎಂದು ವರದಿಯಾಗಿದೆ. ಮಗಳ ಚಿತ್ರಗಳನ್ನು ತೆಗೆದುಕೊಳ್ಳದಂತೆ ವಿನಂತಿಸಿದ್ದರು.