ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರ ಡೀಪ್ಫೇಕ್ ವಿಡಿಯೋ (Deep Fake Video) ರಾಷ್ಟ್ರ ಮಟ್ಟದಲ್ಲಿ ಸಂಚಲನ ಸೃಷ್ಟಿ ಮಾಡಿತ್ತು. ಸ್ವತಃ ಕೇಂದ್ರ ಸರಕಾರವೇ ಈ ಕುರಿತು ಪ್ರತಿಕ್ರಿಯಿಸಿತ್ತು. ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಕೂಡ ಆಕ್ರೋಶ ಹೊರ ಹಾಕಿದ್ದರು. ಇದೀಗ ಕನ್ನಡದ ನಟಿಯರಾದ ಚೈತ್ರಾ ಆಚಾರ್ (Chaitra Achar) ಮತ್ತು ರುಕ್ಮಿಣಿ (Rukmini) ಕೂಡ ಈ ಕುರಿತು ಮಾತನಾಡಿದ್ದಾರೆ. ಈ ನಡೆ ಅಪಾಯಕಾರಿಯಾದದ್ದು ಎಂದಿದ್ದಾರೆ.
ಇಂತಹ ದುಷ್ಟ ನಡೆಯನ್ನು ಮುಲಾಜಿಲ್ಲದೇ ಎಲ್ಲರೂ ಖಂಡಿಸಬೇಕು. ಮೊದಲು ಇಂತಹ ಆಪ್ ಗಳನ್ನು ನಟಿಯರೇ ಬ್ಯಾನ್ ಮಾಡಬೇಕು. ಎಲ್ಲ ರೀತಿಯಲ್ಲೂ ಇದನ್ನು ನಾವು ವಿರೋಧಿಸಬೇಕು. ಸೆಲೆಬ್ರಿಟಿಗಳಿಗೆ ಹೀಗೆ ಆದರೆ, ಸಾಮಾನ್ಯ ಇನ್ನೆಷ್ಟು ಕಷ್ಟ ಪಡಲ್ಲ ಎಂದು ನಟಿಯರು ಮಾತನಾಡಿದ್ದಾರೆ.
ರಶ್ಮಿಕಾ ಮಂದಣ್ಣ (Rashmika Mandanna) ಅವರ ಡೀಪ್ಫೇಕ್ ವಿಡಿಯೋ ಬಗ್ಗೆ ಇದೀಗ ಎಲ್ಲಾ ಕಡೆ ಚರ್ಚೆಗೆ ಗ್ರಾಸವಾಗಿದೆ. ರಶ್ಮಿಕಾ ಪರ ಬಿಗ್ ಬಿ, ನಾಗಚೈತನ್ಯ, ಮೃಣಾಲ್ ಠಾಕೂರ್ ಸೇರಿದಂತೆ ಅನೇಕರು ಧ್ವನಿಯೆತ್ತಿದ್ದಾರೆ. ಈ ಬೆನ್ನಲ್ಲೇ, ಗೆಳತಿ ರಶ್ಮಿಕಾ ಪರ ವಿಜಯ್ ದೇವರಕೊಂಡ (Vijay Devarakonda) ಕೂಡ ಮಾತನಾಡಿದ್ದಾರೆ. ಕಿಡಿಗೇಡಿಗಳ ವಿರುದ್ಧ ವಿಜಯ್ ಕಿಡಿಕಾರಿದ್ದಾರೆ.