ಕಲಬುರಗಿ: ಕಲಬುರಗಿಯ ಸೇಡಂ ಹೊರವಲಯದ ಕೋಡ್ಲಾ ರಸ್ತೆಯಲ್ಲಿ ಭವ್ಯವಾಗಿ ನಿರ್ಮಾಣವಾಗಿರುವ ಗುರು ರಾಘವೇಂದ್ರ ಸ್ವಾಮಿಗಳ ಮಠ ಇವತ್ತು ಲೋಕಾರ್ಪಣೆ ಆಗಲಿದೆ. ಈ ಹಿನ್ನಲೆ ಸೇಡಂ ಪಟ್ಟಣದಲ್ಲಿ ರಾತ್ರಿ ಭವ್ಯ ಶೋಭಾಯಾತ್ರೆ ನಡೆಯಿತು.
ಮಂತ್ರಾಲಯದ 1008 ಶ್ರೀ ಸುಬುಧೇಂದ್ರ ಶ್ರೀಪಾದಂಗಳರವರ ಪುರಪ್ರವೇಶ ನಿಮಿತ್ಯ ನಡೆದ ಶೋಭಾಯಾತ್ರೆಯಲ್ಲಿ ನೂರಾರು ಭಕ್ತರು ಹಾಡು ಭಜನೆ ಮೂಲಕ ಶ್ರೀಗಳಿಗೆ ಸ್ವಾಗತ ಕೋರಿದ್ರು.. ರಾಯರ ಮಠದಲ್ಲಿ ಪ್ರತಿಷ್ಠಾಪಿಸಲಾದ ಮೃತ್ತಿಕಾ ಬೃಂದಾವನಕ್ಕೆ ಮಂತ್ರಾಲಯದ ಶ್ರೀಗಳು ಇವತ್ತು ಪೂಜೆ ಸಲ್ಲಿಸಲಿದ್ದಾರೆ..ಪೂಜೆಗೆ ಮುನ್ನ ಅಭಿಷೇಕ ಅಲಂಕಾರ ವಸ್ತ್ರ ಸಮರ್ಪಣೆ ಸೇವೆಗಳು ನಡೆಯಲಿವೆ ಅಂತ ಮಠದ ಮೂಲಗಳು ತಿಳಿಸಿವೆ…