ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದ ಹೊರ ವಲಯದಲ್ಲಿ ಸಿದ್ಧವಾಗಿರುವ ಗುರು ರಾಘವೇಂದ್ರ ಸ್ವಾಮಿಗಳ ಮಠ ಇದೇ ಡಿಸೆಂಬರ್ 15 ರಂದು ಲೋಕಾರ್ಪಣೆ ಆಗಲಿದ್ದು ಮಂತ್ರಾಲಯದ ಪರಮಪೂಜ್ಯ 1008 ಸುಬುಧೇಂದ್ರ ಶ್ರೀಪಾದಂಗಳರವರು ಮೃತ್ತಿಕಾ ಬೃಂದಾವನದ ಪೂಜೆ ನೆರವೇರಿಸಲಿದ್ದಾರೆ. 14 ರಂದು ಶೋಭಾಯಾತ್ರೆ ನಡೆಯಲಿದ್ದು, ಸಂಜೆ 6 ಕ್ಕೆ ಶ್ರೀಗಳು ಪುರಪ್ರವೇಶ ಮಾಡಲಿದ್ದಾರೆ.
13 ರಿಂದ 15 ರವರೆಗೆ ಮೂರೂ ದಿನವೂ ಕ್ಷೀರಾಭಿಷೇಕ ಪಂಚಾಮೃತಾಭಿಷೇಕ ಅರ್ಚನೆ ಪುಷ್ಪಾಲಂಕಾರ ವಸ್ತ್ರಸಮರ್ಪಣ ಸೇವೆಗಳು ನಡೆಯಲಿವೆ. ಭಕ್ತ ಮಂಡಳಿ ಪೂರ್ವಭಾವಿ ಸಭೆ ನಡೆಸಿದ್ದುಎಲ್ಲ ತಯಾರಿ ಪೂರ್ಣಗೊಂಡಿದೆ ಅಂತ ಮಠದ ಮುಖ್ಯಸ್ಥರಾದ ಗುಂಡೇರಾವ್ ಕುಲಕರ್ಣಿ ತಿಳಿಸಿದ್ದಾರೆ..ಇದೇವೇಳೆ ರಾಯರ ಭಕ್ತರಾದ ಪಿವಿ ಜೋಶಿಯವರು ಕೋಡ್ಲಾ ರಸ್ತೆಯ ಲಕ್ಷ್ಮೀ ನಗರ ಬಡಾವಣೆಯಲ್ಲಿ ಮಠಕ್ಕಾಗಿ ಭೂಮಿ ದಾನಮಾಡಿದ್ದು ವಿಶೇಷ…