ಬೇಸಿಗೆ ಆರಂಭಕ್ಕೂ ಮುನ್ನವೇ ಹಲವು ಜಲಾಶಯಗಳು ಖಾಲಿಯಾಗಿದ್ದರೆ, ಇನ್ನೂ ಕೆಲವು ತಳಮಟ್ಟಕ್ಕೆ ಇಳಿದಿವೆ. ಕಳೆದ ವರ್ಷಕ್ಕಿಂತ ಈ ಬಾರಿ ಎಲ್ಲ ಜಲಾಶಯಗಳಲ್ಲಿ ನೀರಿನ ಪ್ರಮಾಣ ಕುಗ್ಗಿದ್ದರಿಂದ ಜನ-ಜಾನುವಾರುಗಳಿಗೆ ಬೇಸಿಗೆ ಮುನ್ನವೇ ನೀರಿನ ಆತಂಕ ಎದುರಾಗಿದೆ.
ಡ್ಯಾಂಗಳಲ್ಲಿ ಕಳೆದ ವರ್ಷದ ಫೆಬ್ರವರಿಯಲ್ಲಿ ಇರುವ ನೀರಿನ ಪ್ರಮಾಣಕ್ಕಿಂತ ಈ ಬಾರಿ ಕಡಿಮೆ ನೀರು ಇದೆ. ಅಮರ್ಜಾದಲ್ಲಿ ಕಳೆದ ವರ್ಷ 1.197 ಟಿಎಂಸಿ ನೀರಿದ್ದರೆ ಈ ಬಾರಿ 0.413 ಟಿಎಂಸಿಗೆ ಕುಸಿದಿದೆ. ಭೀಮಾದಲ್ಲಿ 1.544 ಟಿಎಂಸಿಯಿದ್ದರೆ ಈ ಬಾರಿ 0.112ಕ್ಕೆ ಇಳಿಕೆಯಾಗಿದೆ. ಚಂದ್ರಂಪಳ್ಳಿ ಡ್ಯಾಂನಲ್ಲಿ ಕಳೆದ ವರ್ಷ 0.626 ಟಿಎಂಸಿ ನೀರಿದ್ದರೆ ಈ ಬಾರಿ 0.455 ಟಿಎಂಸಿ ನೀರಿದೆ. ಗಂಡೋರಿ ನಾಲಾದಲ್ಲಿ ಕಳೆದ ವರ್ಷ 1.375 ಇದ್ದರೆ ಈ ಬಾರಿ 1.259 ಟಿಎಂಸಿ ನೀರಿದೆ. ಇನ್ನೂ ಮುಲ್ಲಾಮರಿಯಲ್ಲಿ ಕಳೆದ ವರ್ಷ 1.306 ಇದ್ದರೆ ಈ ಬಾರಿ 1.105 ಟಿಎಂಸಿ ನೀರಿದೆ
ಈ ಬಾರಿ ಮಳೆ ಕಡಿಮೆಯಾಗಿದೆ. ಮಳೆಬಂದಾಗ ಜಲಾಶಯಗಳಲ್ಲಿ ನೀರು ಶೇಖರಿಸಿಡಲಾಗಿತ್ತು. ಗಂಡೋರಿ ನಾಲಾದಲ್ಲಿ 1.2 ಟಿಎಂಸಿ ನೀರಿದ್ದು, ಕುಡಿಯುವದಕ್ಕಾಗಿ ಮಾತ್ರ ಬಳಸಲು ಚಿಂತಿಸಲಾಗಿದೆ
ಬೆಣ್ಣೆ ತೊರಾ ಜಲಾಶಯದಲ್ಲಿ ಮಾತ್ರ 3.774 ಟಿಎಂಸಿ ನೀರು ಶೇಖರಣೆಯಿದ್ದು, ಕಲಬುರಗಿ ನಗರದ ಜನರಿಗೆ ಕುಡಿಯುವ ನೀರಿನ ಆತಂಕ ಎದುರಾಗಲ್ಲ ಎಂದು ಅಂದಾಜಿಸಲಾಗಿದೆ. ಇತರೆ ಜಲಾಶಗಳಲ್ಲಿ ಅಷ್ಟಕ್ಕಷ್ಟೇ ನೀರು ಇರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ತೊಂದರೆ ಆಗಬಹುದು ಎಂದು ನಿರೀಕ್ಷಿಸಲಾಗಿದೆ.