ಕರಾವಳಿ, ಮಲೆನಾಡು, ಅರೆಮಲೆನಾಡು ಪ್ರಾಂತ್ಯಕ್ಕೆ ಸೀಮಿತಗೊಂಡಿದ್ದ ಅಡಕೆ ಕೃಷಿ ಕಳೆದೆರಡು ವರ್ಷಗಳಿಂದ ವ್ಯಾಪಕ ಪ್ರಮಾಣದಲ್ಲಿ ವಿಸ್ತರಣೆಗೊಳ್ಳುತ್ತಿದ್ದು, ಅಡಕೆ ಮಾರುಕಟ್ಟೆಯ ಭವಿಷ್ಯ ಮಂಕಾಗಿದೆ.ಅಡಕೆ ಕೃಷಿಗೆ ತಗುಲಿರುವ ಹಳದಿ ರೋಗ ಇಡೀ ಬೆಳೆಯ ಬುಡವನ್ನೇ ಅಲ್ಲಾಡಿಸಿದೆ. ರೋಗದಿಂದ ಉಂಟಾದ ತಲ್ಲಣ, ಬೆಳೆ ವಿಸ್ತರಣೆಯಿಂದ ಉಂಟಾದ ಸಂಚಲನ ಮತ್ತು ಕಳ್ಳ ನುಸುಳುವಿಕೆ ಅವಾಂತರಗಳು ನಿರಂತರವಾಗಿ ಬೆಳೆಯ ಮೇಲೆ ತೂಗುಕತ್ತಿಯಾಗಿ ನೇತಾಡುತ್ತಿದ್ದು, ಅಡಕೆ ಕ್ಷೇತ್ರದ ಹಿತರಕ್ಷಣೆಗಾಗಿ ಸರಕಾರ ಸಮಗ್ರ ನೀತಿ ರೂಪಿಸಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ.
ಅಡಕೆ ಕೃಷಿಗೆ ತಗುಲಿರುವ ಹಳದಿ ರೋಗ ಇಡೀ ಬೆಳೆಯ ಬುಡವನ್ನೇ ಅಲ್ಲಾಡಿಸಿದೆ. ರೋಗದಿಂದ ಉಂಟಾದ ತಲ್ಲಣ, ಬೆಳೆ ವಿಸ್ತರಣೆಯಿಂದ ಉಂಟಾದ ಸಂಚಲನ ಮತ್ತು ಕಳ್ಳ ನುಸುಳುವಿಕೆ ಅವಾಂತರಗಳು ನಿರಂತರವಾಗಿ ಬೆಳೆಯ ಮೇಲೆ ತೂಗುಕತ್ತಿಯಾಗಿ ನೇತಾಡುತ್ತಿದ್ದು,
ಕಳೆದ ವರ್ಷ ಹಳೆ ಅಡಕೆಯ ಜತೆಯಲ್ಲೇ ಸಾಗುತ್ತಿದ್ದ ಹೊಸ ಅಡಕೆ ಧಾರಣೆ ಈಗ 360 ರೂ.ನ ಆಸುಪಾಸಿನಲ್ಲಿದೆ. ಕೆಲ ದಿನಗಳಿಂದ ಧಾರಣೆ ಸ್ಥಿರವಾಗಿದ್ದರೂ, ಏರು ಹಾದಿಯ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಬೆಳೆಗಾರರಲ್ಲಿಲ್ಲ. ಆದರೂ ದೀಪಾವಳಿ ಬಳಿಕ ಮಾರುಕಟ್ಟೆ ಚಿಗುರುವ ಆಶಾವಾದ ವ್ಯಕ್ತವಾಗುತ್ತಿದೆ
4 ವರ್ಷಗಳಿಂದ ದಕ್ಷಿಣ ಕನ್ನಡ, ಶಿವಮೊಗ್ಗ ಚಿಕ್ಕಮಗಳೂರು ಸೇರಿದಂತೆ ಅಡಕೆ ಪ್ರಧಾನವಾಗಿ ಬೆಳೆಯುವ ಕರಾವಳಿ – ಮಲೆನಾಡು ಪ್ರಾಂತ್ಯದಲ್ಲಿ ಹಳದಿ ರೋಗ ಅಡಕೆಯನ್ನು ನಾಶ ಮಾಡುತ್ತಿದೆ. ಸಮೀಕ್ಷೆ ಪ್ರಕಾರ ಸುಮಾರು 15 ಸಾವಿರ ಎಕರೆ ಅಡಕೆ ತೋಟ ಹಳದಿ ರೋಗದಿಂದ ನಾಶವಾಗಿದೆ. ರೋಗ ನಿಯಂತ್ರಣದಲ್ಲಿ ಯಾವ ಪ್ರಗತಿಯೂ ದಾಖಲಾಗಿಲ್ಲ. ಸಂಶೋಧನೆಗೆಂದು ಹಿಂದಿನ ಬಿಎಸ್ವೈ ಸರಕಾರ 25 ಕೋಟಿ ರೂ. ಬಿಡುಗಡೆ ಮಾಡಿದ್ದರೂ, ಅದರ ಫಲಶ್ರುತಿ ಈಗಲೂ ಪ್ರಶ್ನಾರ್ಥಕ ಚಿಹ್ನೆಯಾಗಿಯೇ ಉಳಿದಿದೆ.
ಇನ್ನು ಕೋವಿಡ್ ಸಮಯದಲ್ಲಿ ಅಡಿಕೆ ಧಾರಣೆಗೆ ಒಳ್ಳೆಯ ದರ ಏರಿಕೆಯಾಗಿತ್ತು. ದೇಶದ ಗರಿ ಭಾಗಗಳಲ್ಲಿ ಕೋವಿಡ್ ಸರ್ಪಗಾವಲು ಇದ್ದುದರಿಂದ ಯಾವುದೇ ವಿದೇಶಿ ಅಡಿಕೆ, ದೇಶದೊಳಗೆ ಬಂದಿರಲಿಲ್ಲ ಹಾಗಾಗಿ ಒಳ್ಳೆಯ ದರ ಬಂದಿತ್ತು. ಇನ್ನು ಕಳ್ಳ ಸಾಗಾಣಿಕೆ ಗೆ ಕಡಿವಾಣ ಹಾಕಿದರೆ ಮಾತ್ರ ದರ ಹೆಚ್ಚಾಗುವ ಸಾಧ್ಯತೆ ಇದೆ ಎನ್ನುತ್ತಿದ್ದಾರೆ ಅಡಿಕೆ ವರ್ತಕರು.