ಹುಬ್ಬಳ್ಳಿ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಸರಿದೂಗಿಸುವ ಸಲುವಾಗಿ ತಮಿಳುನಾಡಿನ ನಾಗರಕೋಯಿಲ್ ಮತ್ತು ಎಸ್ಎಂವಿಟಿ ಬೆಂಗಳೂರು ನಿಲ್ದಾಣಗಳ ನಡುವೆ ಮೂರು ಟ್ರಿಪ್ಗಳಿಗಾಗಿ ವಿಶೇಷ ರೈಲುಗಳನ್ನು ಓಡಿಸಲು ದಕ್ಷಿಣ ರೈಲ್ವೆ ವಲಯವು ನಿರ್ಧರಿಸಿದೆ. ಈ ಕುರಿತು ಬುಧವಾರ ನೈರುತ್ಯ ರೈಲ್ವೆ ಇಲಾಖೆ ಮಾಹಿತಿ ನೀಡಿದ್ದು, ನ.7, 14 ಮತ್ತು 21ರಂದು ನಾಗರಕೋಯಿಲ್-ಎಸ್ಎಂವಿಟಿ ಬೆಂಗಳೂರು ವಿಶೇಷ ಎಕ್ಸ್ಪ್ರೆಸ್ (06083) ರೈಲು ಸಂಜೆ 7:35 ಗಂಟೆಗೆ ನಾಗರ ಕೋಯಿಲ್ನಿಂದ ಹೊರಟು ಮರುದಿನ ಮಧ್ಯಾಹ್ನ 12:40 ಗಂಟೆಗೆ ಬೆಂಗಳೂರು ತಲಿಪಲಿದೆ. ಅದೇರೀತಿ ನ. 8, 15ಮತ್ತು22ರಂದು ಎಸ್ಎಂವಿಟಿ ಟರ್ಮಿನಲ್ಬೆಂಗಳೂರು-ನಾಗರಕೋಯಿಲ್ ವಿಶೇಷ ಎಕ್ಸ್ಪ್ರೆಸ್ (06084) ರೈಲು ಮಧ್ಯಾಹ್ನ 2 ಗಂಟೆಗೆ ಬೆಂಗಳೂರಿನಿಂದ ಹೊರಟು ಮರುದಿನ ಬೆಳಗ್ಗೆ 6:10 ಗಂಟೆಗೆ ನಾಗರಕೋಯಿಲ್ ತಲುಪಲಿದೆ.
ಈ ವಿಶೇಷ ರೈಲುಗಳು ವಲ್ಲಿಯೂರ್, ತಿರುನೆಲ್ವೇಲಿ, ಕೋವಿಲ್ಪಟ್ಟಿ, ಸತೂರ್, ವಿರುಧುನಗರ, ಮಧುರೈ, ದಿಂಡಿಗಲ್, ತಿರುಚ್ಚಿರಾಪಳ್ಳಿ, ಕರೂರ, ನಮಕ್ಕಲ್, ಸೇಲಂ, ಮೊರಪ್ಪೂರ್, ತಿರುಪತ್ತೂರು, ಬಂಗಾರಪೇಟೆ, ಕೃಷ್ಣರಾಜಪುರಂಗಳಲ್ಲಿ ನಿಲುಗಡೆಗೊಳ್ಳಲಿವೆ. ವಿಶೇಷ ರೈಲುಗಳಲ್ಲಿ ಒಂದು ಎಸಿ ಟು-1ಟೈರ್, ಮೂರು ಎಸಿ ತ್ರಿ-ಟೈರ್, 10 ಸ್ಲಿàಪರ್ ಕ್ಲಾಸ್, ಎರಡು ಸಾಮಾನ್ಯ ದ್ವಿತೀಯ ದರ್ಜೆ, ಎರಡು ಲಗೇಜ್ ಕಮ್ ಬ್ರೇಕ್ ವ್ಯಾನ್ ಬೋಗಿಗಳ ಸಂಯೋಜನೆ ಒಳಗೊಂಡಿದೆ.
ಭಗತ್ ಕಿ ಕೋಠಿ-ಎಸ್ಎಂವಿಟಿ
ದೀಪಾವಳಿ/ಛತ್ ಹಬ್ಬಗಳ ಸಮಯದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಸರಿದೂಗಿಸಲು ಎಸ್ಎಂವಿಟಿ ಬೆಂಗಳೂರು ಮತ್ತು ಭಗತ್ ಕಿ ಕೋಠಿ-ಎಸ್ಎಂವಿಟಿ ಬೆಂಗಳೂರು (04813/04814) ನಡುವೆ ಎಂಟು ಟ್ರಿಪ್ ವಿಶೇಷ ರೈಲುಗಳನ್ನು ಓಡಿಸಲು ವಾಯವ್ಯ ರೈಲ್ವೆ ವಲಯ ನಿರ್ಧರಿಸಿದೆ.11ರಿಂದ ಡಿ. 4ರ ವರೆಗೆ ಭಗತ್ ಕಿ ಕೋಠಿ-ಎಸ್ಎಂವಿಟಿ ಬೆಂಗಳೂರು ವಿಶೇಷ ಎಕ್ಸ್ಪ್ರೆಸ್ (04813) ರೈಲು ಪ್ರತಿ ಶನಿವಾರ ಮತ್ತು ಸೋಮವಾರ ಬೆಳಗ್ಗೆ 5:15 ಗಂಟೆಗೆ ಭಗತ್ ಕಿ ಕೋಠಿದಿಂದ ಹೊರಟು ಮೂರನೇ ದಿನ ರಾತ್ರಿ 11:30 ಗಂಟೆಗೆ ಬೆಂಗಳೂರು ತಲುಪಲಿದೆ.
ಅದೇ ರೀತಿ ನ. 13ರಿಂದ ಡಿ. 6ರ ವರೆಗೆ ಎಸ್ಎಂವಿಟಿ ಬೆಂಗಳೂರು-ಭಗತ್ ಕಿ ಕೋಠಿ ವಿಶೇಷ ಎಕ್ಸ್ಪ್ರೆಸ್ (04814) ರೈಲು ಪ್ರತಿಸೋಮವಾರ ಮತ್ತು ಬುಧವಾರ ಸಂಜೆ 4:30 ಗಂಟೆಗೆ ಬೆಂಗಳೂರಿನಿಂದ ಹೊರಟು ಮೂರನೇ ದಿನ ಮಧ್ಯಾಹ್ನ 12:40 ಗಂಟೆಗೆಭಗತ್ ಕಿ ಕೋಠಿ ತಲುಪಲಿದೆ.ಈ ವಿಶೇಷ ರೈಲುಗಳು ಲೂನಿ, ಸಂದಾರಿ, ಜಾಲೋರ್, ಮಾರ್ವಾರ್ ಭಿನ್ಮಾಲ್, ರಾಣಿವಾರ, ಧನೇರಾ, ಭಿಲ್ಡಿ ಜಂಕ್ಷನ್, ಪಟಾನ್, ಮಹೇಸನಾ ಜಂಕ್ಷನ್, ಅಹಮದಾಬಾದ್ ಜಂಕ್ಷನ್, ವಡೋದರಾ ಜಂಕ್ಷನ್, ಸೂರತ್, ವಾಪಿ, ವಸಾಯಿ ರೋಡ್, ಕಲ್ಯಾಣ ಜಂಕ್ಷನ್, ಪುಣೆ ಜಂಕ್ಷನ್, ಸತಾರಾ, ಮಿರಜ್ ಜಂಕ್ಷನ್,
ಘಟಪ್ರಭಾ, ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಹಾವೇರಿ, ರಾಣಿಬೆನ್ನೂರ, ದಾವಣಗೆರೆ, ಬೀರೂರ, ಅರಸೀಕೆರೆ, ತಮಕೂರು ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿವೆ. ಈ ವಿಶೇಷ ರೈಲುಗಳಲ್ಲಿ ಎರಡು ಎಸಿ ಟು-ಟೈರ್, ಐದು ಎಸಿ ತ್ರಿ-ಟೈರ್, ಏಳು ಸ್ಲಿಪರ್ ಕ್ಲಾಸ್, ನಾಲ್ಕು ಸಾಮಾನ್ಯ ದ್ವಿತೀಯ ದರ್ಜೆ, ಎರಡು ದ್ವಿತೀಯ ದರ್ಜೆ ಕಮ್ ಲಗೇಜ್ ಮತ್ತು ಬ್ರೇಕ್ ವ್ಯಾನ್/ದಿವ್ಯಾಂಗ ಸ್ನೇಹಿ ಬೋಗಿಗಳನ್ನು ಒಳಗೊಂಡಿರುತ್ತವೆ. ಹೆಚ್ಚಿನ ಮಾಹಿತಿಗಾಗಿ ತಮ್ಮ ಹತ್ತಿರದ ರೈಲ್ವೆ ನಿಲ್ದಾಣಗಳನ್ನು ಸಂಪರ್ಕಿಸಬೇಕು ಅಥವಾ ಅಧಿಕೃತ ಜಾಲತಾಣ https://enquiry.indianrail.gov.in ಭೇಟಿ ನೀಡಬಹುದು.