ದ್ವಾರಕೀಶ್ ನಿಧನದಿಂದ ತೀವ್ರ ನೋವಾಗಿದೆ ಎಂದು ನಟ ರಜನಿಕಾಂತ್ ಕಂಬನಿ ಮಿಡಿದಿದ್ದಾರೆ.
ನನ್ನ ಆತ್ಮೀಯ ಗೆಳೆಯ ದ್ವಾರಕೀಶ್ ನಿಧನದಿಂದ ನನಗೆ ತೀವ್ರ ನೋವಾಗಿದೆ. ಹಾಸ್ಯನಟನಾಗಿ ಅವರು ವೃತ್ತಿಜೀವನ ಆರಂಭಿಸಿದ್ದರು. ನಂತರ ದೊಡ್ಡ ನಿರ್ಮಾಪಕನಾಗಿ, ನಿರ್ದೇಶಕನಾಗಿ ಬೆಳೆದು ನಿಂತರು. ಆ ಎಲ್ಲ ಸಂಗತಿಗಳು ಈಗ ನೆನಪಾಗುತ್ತಿವೆ. ಅವರ ಆಪ್ತರು ಮತ್ತು ಕುಟುಂಬದವರಿಗೆ ನನ್ನ ಸಂತಾಪಗಳು’ ಎಂದು ರಜನಿಕಾಂತ್ ಅವರು ‘ಎಕ್ಸ್’ (ಟ್ವಿಟರ್) ಮೂಲಕ ಬರೆದುಕೊಂಡಿದ್ದಾರೆ.
ವೀಕ್ ಬೌಲಿಂಗ್, ಕೋಪದಲ್ಲಿ ಜಾಡಿಸಿ ಒದ್ದ ಕೊಹ್ಲಿ! – ವಿರಾಟ್ ಕಳಿಸಿಬಿಡಿ ಎಂದು ಫ್ಯಾನ್ಸ್ ಮನವಿ!
ರಜನಿಕಾಂತ್ ಮತ್ತು ದ್ವಾರಕೀಶ್ ನಡುವೆ ಒಳ್ಳೆಯ ಒಡನಾಟ ಇತ್ತು. ರಜನಿ ನಟಿಸಿದ್ದ ‘ಅಡುತ ವಾರಿಸು’ ಸಿನಿಮಾವನ್ನು ದ್ವಾರಕೀಶ್ ಅವರು ನಿರ್ಮಾಣ ಮಾಡಿದ್ದರು. ಆ ಸಿನಿಮಾ 1983ರಲ್ಲಿ ಬಿಡುಗಡೆ ಆಗಿತ್ತು. ಶ್ರೀದೇವಿ ಕೂಡ ಆ ಚಿತ್ರದಲ್ಲಿ ಅಭಿನಯಿಸಿದ್ದರು. ಇಂದು ತಮ್ಮ ಗೆಳೆಯನ ಅಗಲಿಕೆಗೆ ರಜನಿಕಾಂತ್ ಅವರು ಸಂತಾಪ ಸೂಚಿಸಿದ್ದಾರೆ. ಹಾಗೆಯೇ ಅನೇಕ ನಟ-ನಟಿಯರು, ತಂತ್ರಜ್ಞರು ದ್ವಾರಕೀಶ್ ಅವರ ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ಬುಧವಾರ (ಏಪ್ರಿಲ್ 17) ಬೆಳಗ್ಗೆ 7 ಗಂಟೆಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ದ್ವಾರಕೀಶ್ ಅವರ ಪಾರ್ಥಿವ ಶರೀರ ಇಡಲಾಗುವುದು. 11 ಗಂಟೆವರೆಗೂ ಅಂತಿಮ ದರ್ಶನಕ್ಕೆ ಅವಕಾಶ ಇರಲಿದೆ. 11 ಗಂಟೆ ಬಳಿಕ ಚಾಮರಾಜಪೇಟೆಯಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂಬ ಮಾಹಿತಿ ಇದೆ. ‘