ಬೆಳಗಾವಿ : ಬಿಮ್ಸ್ನಲ್ಲಿ ಬಾಣಂತಿಯರ ಸಾವಿನ ಸರಣಿ ಮುಂದುವರೆದಿದೆ. ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿ ಸಾವನ್ನಪ್ಪಿದ್ದಾರೆ. ಕರಡಿಗುದ್ದಿ ಗ್ರಾಮದ ಗಂಗವ್ವ ಗೊಡಕುಂದ್ರಿ (31) ಮೃತ ದುರ್ದೈವಿ. ಎರಡು ದಿನದ ಹಿಂದೆ ಹೆರಿಗೆ ಬಳಿಕ ಬಿಪಿ ಲೋ ಆಗಿ ಗಂಗವ್ವ ಸಾವನ್ನಪ್ಪಿದ್ದಾರೆ.
ಕಳೆದ ಜ.28ರಂದು ಗಂಗವ್ವ ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು ಜ.30 ರಂದು ರಾತ್ರಿ 11.50ರ ಸುಮಾರಿಗೆ ಹೆರಿಗೆಯಾಗಿ ಮಗುವಿಗೆ ಜನ್ಮ ನೀಡಿದ್ದರು. ಆದರೆ ಮರುದಿನ ಬೆಳಗಿನ ಜಾವ ಬಿಪಿ ಲೋ ಆಗಿದ್ದು, ಸೀರಿಯಸ್ ಆಗಿದೆ ಎಂದಿದ್ದಾರೆ. ಇದಾದ ಸ್ಪಲ್ಪ ಹೊತ್ತಿಗೆ ಬಾಣಂತಿ ಸಾವಿನ ವಿಚಾರ ತಿಳಿಸಿದ್ದಾರೆ. ಬಾಣಂತಿ ಸಾವಾಗ್ತಿದ್ದಂತೆ ತರಾತುರಿಯಲ್ಲಿ ಶವ ಕೊಟ್ಟು ಕಳುಹಿಸಿದ್ದಾರೆ.ಅಲ್ಲದೇ ವೈದ್ಯರು ಗಂಗವ್ವ ಗೊಡಕುಂದ್ರಿ ಕುಟುಂಬಸ್ಥರ ಕಡೆಯಿಂದ ಖಾಲಿ ಪೇಪರ್ ಮೇಲೆ ಸಹಿ ಮಾಡಿಸಿಕೊಂಡು ಮೃತದೇಹವನ್ನು ಕೊಟ್ಟು ಕಳುಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬಿಮ್ಸ್ ವೈದ್ಯರ ನಿರ್ಲಕ್ಷ್ಯದಿಂದಲೇ ಸಾವಾಗಿದೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ತಮ್ಮ ಸಹೋದರಿಗೆ ಸಾವಿಗೆ ವೈದ್ಯರೇ ಕಾರಣ ಎಂದು ಗಂಗವ್ವ ಸಹೋದರ ಶಂಕ್ರಪ್ಪ ಆರೋಪಿಸಿದ್ದಾರೆ.
ನಿನ್ನೆಯಷ್ಟೇ ಬಳ್ಳಾರಿಯ ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿ ಮೃತಪಟ್ಟಿದ್ದರು. ಕಳೆದ ವರ್ಷ ಬೆಳಗಾವಿ 29 ಬಾಣಂತಿಯರು ಮತ್ತು 322 ಶಿಶುಗಳು ಮೃತಪಟ್ಟಿದ್ದಾರೆ. ಬಳ್ಳಾರಿಯ ಬಿಮ್ಸ್ ನಲ್ಲಿ ಐವರು ಬಾಣಂತಿಯರು ಸಾವನ್ನಪ್ಪಿದ್ದಾರೆ..