ತುಮಕೂರು:- ಬಾಣಂತಿಯರ ಸಾವು ಪ್ರಕರಣ ಕರ್ನಾಟಕದಲ್ಲಿ ಮುಂದುವರಿದಿದೆ. ಜಿಲ್ಲೆಯ ತಿಪಟೂರು ತಾಲೂಕು ಆಸ್ಪತ್ರೆಯಲ್ಲಿ ಸಿಸೇರಿಯನ್ ಆದ ಕೆಲವೇ ಗಂಟೆಗಳಲ್ಲಿ ಬಾಯಿ, ಮೂಗಿನಲ್ಲಿ ರಕ್ತ ಬಂದು ಬಾಣಂತಿ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ.
ಚೀಟಿಂಗ್ ಕೇಸಲ್ಲಿ ನಟನಿಗೆ ‘ಧರ್ಮ’ಸಂಕಟ: ಧರ್ಮ ಬಂಧನಕ್ಕೆ ಪೊಲೀಸರ ತಲಾಷ್!
26 ವರ್ಷದ ಫಿರ್ದೋಸ್ ಮೃತ ಬಾಣಂತಿ ಎನ್ನಲಾಗಿದೆ. ಫಿರ್ದೋಸ್, ಹೆರಿಗೆಗಾಗಿ ತಿಪಟೂರಿನ ಗಾಂಧಿನಗರದ ತವರು ಮನೆಗೆ ಹೋಗಿದ್ದರು. ಡಿ.27ರಂದು ಹೆರಿಗೆ ಮಾಡಿಸಿಕೊಳ್ಳಲು ಆಸ್ಪತ್ರೆಗೆ ದಾಖಲಾಗಿದ್ದರು. ಎರಡನೇ ಮಗುವಿಗೆ ಸಿಸೇರಿಯನ್ ಮಾಡಿಸಿಕೊಂಡಿದ್ದ ಫಿರ್ದೋಸ್, ಬಳಿಕ ಕೆಮ್ಮು ಅತಿಯಾಗಿದೆ.
ಕೆಮ್ಮು ಕಫ ಜೋರಾಗಿದ್ದರಿಂದ ಮೂಗು ಮತ್ತು ಬಾಯಲ್ಲಿ ರಕ್ತ ಬರಲಾರಂಬಿಸಿತ್ತು. ನಿನ್ನೆ ಮಧ್ಯರಾತ್ರಿ 2.30ರಲ್ಲಿ ಮೃತಪಟ್ಟಿದ್ದಾರೆ. ಇನ್ನು ಈ ಘಟನೆ ಬಗ್ಗೆ ವೈದ್ಯರನ್ನು ಕೇಳಿದರೆ, ಮಹಿಳೆಗೆ ಪಲ್ಮನರಿ ಎಂಬಾಲಿಸಮ್ ಇದ್ದು, ಈ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ ಎನ್ನುತ್ತಿದ್ದಾರೆ.