ಸಿಯೋಲ್: ದಕ್ಷಿಣ ಕೊರಿಯಾದ ಮುವಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ 181 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನವು ರನ್ವೇಯಿಂದ ಪಲ್ಟಿಯಾದ ಬಳಿಕ ಬೆಂಕಿ ಹೊತ್ತಿಕೊಂಡಿದ್ದು. ಪರಿಣಾಮ 177 ಜನರು ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ಅಗ್ನಿಶಾಮಕ ಸಂಸ್ಥೆ ದೃಢಪಡಿಸಿದೆ.
ಜೆಜು ಏರ್ ವಿಮಾನವು ದಕ್ಷಿಣ ಕೊರಿಯಾದಲ್ಲಿ ಇಳಿಯುವಾಗ ಪತನಗೊಂಡ ನಂತರ 124 ಜನರು ಮೃತಪಟ್ಟಿದ್ದಾರೆ ಎಂದು ದೃಢಪಡಿಸಲಾಗಿತ್ತು. ಇದೀಗ ಮೃತರ ಸಂಖ್ಯೆ 177 ಜನರು ಮೃತಪಟ್ಟಿದ್ದು ಉಳಿದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ದೇಶದ ಅಗ್ನಿಶಾಮಕ ಸಂಸ್ಥೆ ದೃಢಪಡಿಸಿದೆ.
ಫ್ಲೈಟ್ ರಾಡಾರ್ ಪ್ರಕಾರ ಬೋಯಿಂಗ್ 737-8AS — ಜೆಜು ಏರ್ ಪ್ಲೇನ್ ನ್ನು ಸ್ಥಳೀಯ ಎಂಬಿಸಿ ಬ್ರಾಡ್ಕಾಸ್ಟರ್ ಹಂಚಿಕೊಂಡ ವೀಡಿಯೊವು ಮುವಾನ್ ವಿಮಾನ ನಿಲ್ದಾಣದ ರನ್ವೇಯಲ್ಲಿ ಇಳಿಯುವುದನ್ನು ತೋರಿಸಿದೆ, ಇಡೀ ವಿಮಾನವು ಜ್ವಾಲೆಯಲ್ಲಿ ಹೊತ್ತಿ ಉರಿದು ಎಂಜಿನ್ ನಿಂದ ಹೊಗೆ ಬರುತ್ತಿದೆ.
ಪಕ್ಷಿಗಳೊಂದಿಗೆ ಘರ್ಷಣೆ ಮತ್ತು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು ಅಪಘಾತಕ್ಕೆ ಕಾರಣವೆಂದು ಅಧಿಕಾರಿಗಳು ಹೇಳಿದ್ದಾರೆ.
ಅಪಘಾತಕ್ಕೀಡಾದ ಜೆಜು ಏರ್ ವಿಮಾನದಲ್ಲಿ ಉಳಿದ ಪ್ರಯಾಣಿಕರು ಬದುಕುಳಿಯುವ ಸಾಧ್ಯತೆ ಕಡಿಮೆ ಎಂದು ದಕ್ಷಿಣ ಕೊರಿಯಾದ ಅಗ್ನಿಶಾಮಕ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿಮಾನ ತಡೆಗೋಡೆಗೆ ಡಿಕ್ಕಿ ಹೊಡೆದ ನಂತರ ಪ್ರಯಾಣಿಕರನ್ನು ವಿಮಾನದಿಂದ ಹೊರಹಾಕಲಾಯಿತು, ಬದುಕುಳಿಯುವ ಸಾಧ್ಯತೆ ಕಡಿಮೆ ಎಂದು ಸ್ಥಳೀಯ ಅಗ್ನಿಶಾಮಕ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.
ವಿಮಾನವು ಸಂಪೂರ್ಣವಾಗಿ ನಾಶವಾಗಿದೆ, ಮೃತರನ್ನು ಗುರುತಿಸುವುದು ಕಷ್ಟಕರವಾಗಿದೆ. ನಾವು ಅವಶೇಷಗಳನ್ನು ಪತ್ತೆಹಚ್ಚಲು ಮತ್ತು ಮರುಪಡೆಯಲು ಸಮಯ ತೆಗೆದುಕೊಳ್ಳುತ್ತಿದೆ ಎಂದು ಮುವಾನ್ನಲ್ಲಿರುವ ಅಗ್ನಿಶಾಮಕ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.