ಚಂಢಿಗಡ:- ಶಿವಸೇನೆ ಮುಖಂಡನ ಮೇಲೆ ಹಾಡಹಗಲೇ ಡೆಡ್ಲಿ ಅಟ್ಯಾಕ್ ನಡೆದಿರುವ ಘಟನೆ ಜರುಗಿದೆ. ಪಂಜಾಬ್ನ ಶಿವಸೇನೆ ಮುಖಂಡನ ಮೇಲೆ ನಾಲ್ವರು ದುಷ್ಕರ್ಮಿಗಳು ಅಟ್ಟಾಡಿಸಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಮಳೆ ಅಬ್ಬರ: ನಾಳೆ ಈ ಶಾಲಾ-ಕಾಲೇಜಿಗಳಿಗೆ ರಜೆ ಘೋಷಣೆ!
ಲುಧಿಯಾನದಲ್ಲಿ ಘಟನೆ ಜರುಗಿದೆ. ಸಂದೀಪ್ ಥಾಪರ್ ಅಲಿಯಾಸ್ ಗೋರಾ ಮೇಲೆ ಸ್ಕೂಟರ್ನಲ್ಲಿ ಬಂದ ನಿಹಾಂಗ್ ಉಡುಪಿನಲ್ಲಿದ್ದ ನಾಲ್ವರು ಅಪರಿಚಿತ ವ್ಯಕ್ತಿಗಳು ಹಲ್ಲೆ ನಡೆಸಿದ್ದಾರೆ
ಥಾಪರ್ ಆಸ್ಪತ್ರೆಯಿಂದ ಹೊರ ಬರುತ್ತಿರುವುದನ್ನು ಗಮನಿಸಿದ ದುಷ್ಕರ್ಮಿಗಳು ಆತನನ್ನು ಹಿಂಬಾಲಿಸಲು ಶುರು ಮಾಡುತ್ತಾರೆ. ಆಗ ದಾಳಿಕೋರರಲ್ಲಿ ಒಬ್ಬ ಕತ್ತಿಯಿಂದ ಥಾಪರ್ ತಲೆಯ ಮೇಲೆ ಬಿಡದೇ ಹೊಡೆಯಲು ಶುರು ಮಾಡುತ್ತಾನೆ. ಥಾಪರ್ ಕೈ ಜೋಡಿಸಿ ಬಿಟ್ಟು ಬಿಡಿ ಎಂದು ಅಂಗಾಲಾಚುತ್ತಿದ್ದರೂ ಅದನ್ನು ಲೆಕ್ಕಿಸದೇ ಆತನ ಮೇಲೆ ನಿರಂತರ ದಾಳಿ ನಡೆಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಮತ್ತೊಬ್ಬ ನಿಹಾಂಗ್ ಕತ್ತಿಯಿಂದ ದಾಳಿ ಮುಂದುವರಿಸಿದಾಗ ಶಿವಸೇನಾ ಪಂಜಾಬ್ ನಾಯಕ ಬ್ಯಾಲೆನ್ಸ್ ಕಳೆದುಕೊಂಡು ಸ್ಕೂಟರ್ ಸಮೇತ ರಸ್ತೆಯಲ್ಲಿ ಬಿದ್ದಿದ್ದಾರೆ. ಅಲ್ಲೇ ಇದ್ದ ಪ್ರಯಾಣಿಕರು ಆಘಾತದಿಂದ ನೋಡುತ್ತಿದ್ದಂತೆ ದಾಳಿಕೋರರು ಸ್ಕೂಟರ್ನಲ್ಲಿ ಪರಾರಿಯಾಗಿದ್ದಾರೆ.
ಸ್ಥಳದಲ್ಲಿ ಅನೇಕ ಜನ ಥಾಪರ್ ಸಹಾಯಕ್ಕೆ ಬರಲೇ ಇಲ್ಲ. ಟ್ರಸ್ಟ್ನ ಸಂಸ್ಥಾಪಕ-ಅಧ್ಯಕ್ಷ ರವೀಂದರ್ ಅರೋರಾ ಅವರ ನಾಲ್ಕನೇ ಪುಣ್ಯತಿಥಿಯ ಅಂಗವಾಗಿ ನಡೆದ ಸಮಾರಂಭದಲ್ಲಿ ಭಾಗವಹಿಸಿದ್ದ ಥಾಪರ್ ಅವರು ಸಂವೇದನಾ ಟ್ರಸ್ಟ್ ಎಂಬ ಎನ್ಜಿಒ ಕಚೇರಿಯಿಂದ ಸಿವಿಲ್ ಆಸ್ಪತ್ರೆ ಬಳಿ ತೆರಳಿದ ನಂತರ ಈ ದಾಳಿ ನಡೆದಿದೆ
ಇನ್ನು ಮಾರಣಾಂತಿಕ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಥಾಪರ್ನನ್ನು ಸ್ಥಳೀಯ ಸಿವಿಲ್ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿಂದ ಅವರನ್ನು ಸ್ಥಳೀಯ ದಯಾನಂದ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಲಾಯಿತು. ಅಪರಿಚಿತ ದಾಳಿಕೋರರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ಶೋಧ ನಡೆಸಲಾಗುತ್ತಿದೆ