ಬೆಂಗಳೂರು: ಹೊಸಕೋಟೆ ಈ ರಾಜಕೀಯಕ್ಕೆ ಎಷ್ಟು ಹೆಸರುವಾಸಿಯೋ ಅಷ್ಟೇ ಹೊಡಿಬಡಿ ಅನ್ನೋದಕ್ಕೆ ಪ್ರಸಿದ್ಧಿ ಆಗಿ ಹೋಗಿದೆ. ಸಣ್ಣ ಪುಟ್ಟ ವಿಷಯಗಳು ಲಾಂಗು ಮಚ್ಚು ಹಿಡಿದು ಹೊಡೆದಾಟ ನಡೆಸುವ ಹಂತಕ್ಕೆ ಹೋಗುತ್ತಾರೆ. ಇಂತಹ ಒಂದು ಘಟನೆ ಇತ್ತೀಚೆಗೆ ಹೊಸಕೋಟೆ ನಗರದಲ್ಲಿ ನಡೆದಿದೆ. ದಾರಿಯಲ್ಲಿ ಹೋಗುತ್ತಿದ್ದ ಯುವಕನ ಮೇಲೆ ಏಕಾಏಕಿ ಗುಂಪೊಂದು ಡೆಡ್ಲಿ ಅಟ್ಯಾಕ್ ಮಾಡಲಾಗಿದೆ ಈ ಬಗ್ಗೆ ಕಂಪ್ಲೀಟ್ ರಿಪೋರ್ಟ್..
ಹೌದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದಲ್ಲಿ ಕಳೆದ ಒಂದು ವಾರದ ಹಿಂದೆ ಸೈಯದ್ ಜಿಶಾನ್ ಎಂಬ ವಿದ್ಯಾರ್ಥಿ ಮೇಲೆ ಒಂಭತ್ತು ಜನ ಗುಂಪೊಂದು ಅಟ್ಯಾಕ್ ಮಾಡಿ ಲಾಂಗು ಮಚ್ಚು ಸೇರಿದಂತೆ ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಸೈಯದ್ ಜಿಶಾನ್ ಮತ್ತು ಅವನ ಸ್ನೇಹಿತರು ಟ್ಯೂಷನ್ ಮುಗಿಸಿಕೊಂಡು ಮನೆಗೆ ವಾಪಸ್ ಆಗುತ್ತಿದ್ದ ವೇಳೆ ಹೊಸಕೋಟೆ ನಗರದ ಕಣ್ಣೂರಹಳ್ಳಿ ರಸ್ತೆಯಲ್ಲಿ ಲಾಂಗು, ಮಚ್ಚು,
PAN 2.0: ನಿಮ್ಮ Pan card ಇನ್ಮುಂದೆ QR ಕೋಡ್ ನೊಂದಿಗೆ ಬರಲಿವೆ..! ಏನಿದು ಪ್ಯಾನ್ 2.0 ಯೋಜನೆ.? ಇಲ್ಲಿದೆ ಮಾಹಿತಿ
ವಿಕೇಟ್ ಮತ್ತು ಬ್ಯಾಟ್ ಗಳನ್ನು ಹಿಡಿದ ದುಷ್ಕರ್ಮಿಗಳ ತಂಡ ಏಕಾಏಕಿ ಹಲ್ಲೆ ಮಾಡಿದ್ದಾರೆ. ಮಾರಣಾಂತಿಕ ಹಲ್ಲೆಯಲ್ಲಿ ಸೈಯದ್ ಕೈ ಬೆರಳು ಕಟ್ ಆಗಿದೆ. ಮತ್ತೊಂದು ಕೈಗೆ ತೀವ್ರವಾದ ಗಾಯ ಆಗಿದೆ ಜೊತೆಗೆ ಬೆನ್ನಿನ ಭಾಗಕ್ಕೆ ಸಹ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿದೆ. ಸದ್ಯಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಾಗುತ್ತಿದೆ.
ಇನ್ನೂ ಕುರಿತು ಹೊಸಕೋಟೆ ಪೋಲಿಸ್ ಠಾಣೆಯಲ್ಲಿ ಖಾದಿರ್, ಫಾರಜ್, ಮಸ್ತಾನ್, ಇಜಾಜ್, ನವಾಜ್ , ಶಾಹೀದ್, ಜುನೇದ್, ರೋಷನ್ , ಗೌಸ್ ಸೇರಿದಂತೆ ಇತರರ ಮೇಲೆ ಪ್ರಕರಣ ಸಹ ದಾಖಲಾಗಿದೆ. ಪ್ರಕರಣ ದಾಖಲಾಗಿ ಒಂದು ವಾರ ಕಳೆದರೂ ಯಾವೊಬ್ಬ ಆರೋಪಿಯನ್ನು ಪೋಲಿಸರು ಬಂಧಿಸಿಲ್ಲ. ಡೆಡ್ಲಿ ಅಟ್ಯಾಕ್ ನಿಂದ ಕಾಲೇಜಿಗೆ ಹೋಗುತ್ತಿದ್ದ ಸೈಯದ್ ಆಸ್ಪತ್ರೆ ಪಾಲಾಗಿದ್ದಾನೆ ಎಂದು ಕುಟುಂಬಸ್ಥರು ನೋವನ್ನು ತೋಡಿಕೊಳ್ಳುತ್ತಿದ್ದಾರೆ. ಪ್ರಭಾವಿಗಳ ಒತ್ತಡಕ್ಕೆ ಮಣಿದು ಆರೋಪಿಗಳನ್ನು ಬಂಧಿಸುತ್ತಿಲ್ಲ ಎಂದು ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ.
ಒಟ್ಟಾರೆ ಏನೇ ಇರಲಿ ಸಣ್ಣ ಪುಟ್ಟ ವೈಷಮ್ಯಕ್ಕೆ ಈ ರೀತಿ ಲಾಂಗು ಮಚ್ಚು ಹಿಡಿದು ಹೊಡಿಬಡಿ ಅನ್ನೋದಕ್ಕೆ ಮುಂದಾಗುವುದು ಕಾನೂನು ಪ್ರಕಾರ ಅಪರಾಧ. ಇಂತಹ ಆರೋಪಿಗಳನ್ನು ಕಾನೂನಿನ ಪ್ರಕಾರ ಬಂಧಿಸದೇ ಹೋದರೆ ಮುಂದೊಂದು ದಿನ ದೊಡ್ಡ ದೊಡ್ಡ ಅಪರಾಧಗಳಲ್ಲಿ ಭಾಗಿಯಾಗಲು ದಾರಿ ಮಾಡಿಕೊಟ್ಟಂತೆ ಆಗುತ್ತದೆ.