ಬೆಂಗಳೂರು:- ಸಾರಿಗೆ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ಪುಂಡ ಯುವಕನಿಂದ KKRTC ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.
ವೃದ್ಧನ ಶ್ವಾಸನಾಳದಲ್ಲಿ ಸಿಲುಕಿದ ಅಡಿಕೆ ತುಂಡು: ಕೇವಲ 7 ನಿಮಿಷದಲ್ಲಿ ಮುಗಿದ ಶಸ್ತ್ರ ಚಿಕಿತ್ಸೆ!
ಯುವಕನ ಏಟಿಗೆ ಸ್ಥಳದಲ್ಲೇ ಚಾಲಕ ಕುಸಿದು ಬಿದ್ದಿದ್ದಾನೆ. ಬಳ್ಳಾರಿಯ ಕುರುಡುಗೋಡು ಬಸ್ ನಿಲ್ದಾಣದ ಬಳಿ ಈ ಘಟನೆ ಜರುಗಿದೆ. ಬಸ್ ಹತ್ತುವ ವಿಚಾರಕ್ಕೆ ಈ ಘಟನೆ ಜರುಗಿದೆ.
ಒಬ್ಬರಿಗೊಬ್ಬರು ಮಾತಿನ ಚಕಮಕಿ ನಡೆದಿದೆ. ಈ ವೇಳೆ 52 ವರ್ಷದ ಚಾಲಕನ ಮೇಲೆ ಪುಂಡ ಯುವಕ ಎರಗಿದ್ದಾನೆ. ಬೀಮಣ್ಣ ಎಂಬ ಚಾಲಕ ಮೇಲೆ ಬಸ್ ನಿಲ್ದಾಣದಲ್ಲಿ ಹಲ್ಲೆ ನಡೆಸಲಾಗಿದ್ದು, ಸಾರಿಗೆ ನಿಗಮದ ಸಿಬ್ಬಂದಿಗಳಿಂದ ಯುವಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದೆ.
ಮಾರಣಾಂತಿಕ ಹಲ್ಲೆ ನಡೆಸಿದ ಯುವಕನ ವಿರುದ್ಧ ಕ್ರಮಕ್ಕೆ ಒತ್ತಾಯ ಮಾಡಲಾಗಿದೆ. ಈಗಾಗಲೇ ಯುವಕನ ವಿರುದ್ಧ ಕುರುಗೋಡು ಠಾಣೆಯಲ್ಲಿ ದೂರು ದಾಖಲಾಗಿದೆ