ಚಿಕ್ಕಮಗಳೂರು:– ರೇಸ್ಗೆ ಇಳಿದವರಂತೆ ಎರಡು ದ್ವಿಚಕ್ರ ವಾಹನಗಳೂ ವೇಗವಾಗಿ ಬಂದಿದ್ದು ಅದರಲ್ಲಿ ಒಂದು ಬೈಕ್ ಓವರ್ ಟೇಕ್ ಮಾಡಲು ಹೋಗಿ ಪಲ್ಟಿಯಾದ ಘಟನೆ ಜಿಲ್ಲೆಯ ಚಿಕ್ಕಮಾಗರವಳ್ಳಿ ಗ್ರಾಮದಲ್ಲಿ ಜರುಗಿದೆ.
ಬೆಂಗಳೂರಿಗೆ ಜೀಕಾ ಆತಂಕ: ಗರ್ಭಿಣಿಯರಿಗೆ ಪ್ರತ್ಯೇಕ ಸ್ಕ್ರೀನಿಂಗ್ ವ್ಯವಸ್ಥೆಗೆ ಸಿದ್ಧತೆ!
ರೋಡ್ ಎಡ್ಜ್ ಗೆ ಬಂದು ಓವರ್ ಟೇಕ್ ಮಾಡಲು ಯತ್ನಿಸುವಾಗ ಆಯಾತಪ್ಪಿ 4 ಬಾರಿ ಬೈಕ್ ಪಲ್ಟಿ ಹೊಡೆದಿದೆ. ವೇಗವಾಗಿ ಬಂದ ಬೈಕ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ನಾಲ್ಕು ಬಾರಿ ಬೈಕ್ ಪಲ್ಟಿಯಾಗಿ, ಚಾಲಕ ಹಾರಿ ಬಿದ್ದಿದ್ದಾನೆ. ಪವಾಡ ಸದೃಶದ ರೀತಿ ಚಾಲಕ ಎದ್ದು ನಿಂತಿದ್ದು ಅದೃಷ್ಟವಶಾತ್ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.