ಬೆಂಗಳೂರು:- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಕನ್ನಡ ಬೋರ್ಡ್ ಅಳವಡಿಕೆಗೆ ಫೆ.28 ಡೆಡ್ ಲೈನ್ ನಿಯಮ ಹಿನ್ನೆಲೆ, ಅಂಗಡಿಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಫೆಬ್ರವರಿ 28ಕ್ಕೆ ಕನ್ನಡ ಬೋರ್ಡ್ ಅಳವಡಿಕೆಗೆ ಡೆಡ್ ಲೈನ್ ಹಿನ್ನಲೆ ಎಚ್ಚೆತ್ತುಕೊಂಡ ಪಾಲಿಕೆಯಿಂದ 28 ರೊಳಗಾಗಿ ಕನ್ನಡ ಬೋರ್ಡ್ ಅಳವಡಿಕೆಗೆ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲ ಅಂಗಡಿಗಳು, ವ್ಯಾಪಾರಸ್ಥರಿಗೆ ನೋಟಿಸ್ ನೀಡುತ್ತಿದೆ. ಈ ವರೆಗೆ ಒಟ್ಟು 34262 ಸಾವಿರಕ್ಕೂ ಅಧಿಕ ನೋಟಿಸ್ ನೀಡಲಾಗಿದೆ. ಬೊಮ್ಮನಹಳ್ಳಿ – 6762 ಯಲಹಂಕ – 4518, ಬೆಂಗಳೂರು ದಕ್ಷಿಣ – 3747, ಮಹದೇವಪುರ – 4838, ದಾಸರಹಳ್ಳಿ – 1458, ಬೆಂಗಳೂರು ಪಶ್ಚಿಮ – 5650, ಪೂರ್ವ ವಲಯ – 5579 ರಾಜ ರಾಜೇಶ್ವರಿ ವಲಯದಲ್ಲಿ 2010 ನೋಟಿಸ್ ನೀಡಲಾಗಿದೆ.
ಇನ್ನೂ ಈ ಹಿಂದೆ ನಾಮಫಲಕದಲ್ಲಿ ಮೇಲೆ ಕನ್ನಡ ಕೆಳಗಡೆ ಯಾವುದೇ ಭಾಷೆ ಬೇಕಾದರು ಇರಬೇಕು ಎಂದು ಹೇಳಿದ್ದರೂ ಈಗ ಬೋರ್ಡ್ ನಲ್ಲಿ ಕನ್ನಡ 60% ಇರಬೇಕು ಅಂತ ಹೇಳುತ್ತಿದ್ದಾರೆ. ಈಗಾಗಲೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೋರ್ಡ್ ಅಳವಡಿಸಿದ್ದೇವೆ ಈಗ ಮತ್ತೆ ಬೋರ್ಡ್ ಅಳವಡಿಸೋದು ಕಷ್ಟ ಎಂದು ಕೆಲ ಅಂಗಡಿ ಮಾಲೀಕರು ಅಳಲು ತೋಡಿಕೊಂಡಿದ್ದಾರೆ
ಒಟ್ಟಿನಲ್ಲಿ ಒಂದೆಡೆಗೆ ಬಿಬಿಎಂಪಿ ಕನ್ನಡ ಬೋರ್ಡ್ ಅಳವಡಿಕೆಗೆ ನೋಟಿಸ್ ನೀಡುವ ಮೂಲಕ ಕೈ ತೊಳೆದುಕೊಳ್ಳುತ್ತಿದೆ.