ಬಳ್ಳಾರಿ: ಚರಂಡಿಯಲ್ಲಿ ಎರಡು ದಿನದ ನವಜಾತ ಶಿಶು ಮೃತದೇಹ ಪತ್ತೆಯಾಗಿರುವ ಘಟನೆ ಬಳ್ಳಾರಿಯ ರಾಜೋತ್ಸವ ನಗರದಲ್ಲಿ ನಡೆದಿದೆ. 2 ದಿನದ ಹಿಂದೆ ಜನನವಾದ ಗಂಡು ಶಿಶುವಾಗಿದ್ದು,
ಚರಂಡಿಯಲ್ಲಿದ್ದ ಶಿಶುವಿನ ಮೃತ ದೇಹ ಸ್ಥಳೀಯರು ಹೊರ ತೆಗೆದಿದ್ದಾರೆ. ಮಗುವಿನ ಪೋಷಕರು ಪತ್ತೆಯಾಗದ ಹಿನ್ನೆಲೆ ಸ್ಥಳಕ್ಕೆ ಬ್ರೂಸ್ ಪೇಟ್ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.