ಬೆಳಗಾವಿ : ಯಾರದ್ದೋ ದುಡ್ಡು ಕಾಂಗ್ರೆಸ್ ಸಮಾವೇಶ ಎಂಬ ಶೆಟ್ಟರ್ ಹೇಳಿಕೆ ಡಿಸಿಎಂ ಡಿಕೆಶಿವಕುಮಾರ್ ತಿರುಗೇಟು ನೀಡಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಶೆಟ್ಟರ್ ಅವರಿಗೆ ಬೆಳಗಾವಿಯಲ್ಲಿ ಟೂರ್ ಕರೆದುಕೊಂಡು ಹೋಗ್ತೀನಿ. ಕಾಂಗ್ರೆಸ್ ಗೆ ಬಂದಾಗ ಏನೇನೂ ಮಾತಾಡಿದ್ರೂ ಗೊತ್ತಿದೆ. ಅವರ ನುಡಿಮುತ್ತುಗಳನ್ನ ಎಲ್ಲರೂ ಕೇಳಿದ್ದಾರೆ ಎಂದ ಶೆಟ್ಟರ್ ಗೆ ಟಾಂಗ್ ನೀಡಿದರು. ನಾನು ಒಬ್ಬ ದೈವ ಭಕ್ತ, ಪೂಜೆ ಮಾಡಿ ಶಕ್ತಿ ದೇವತೆ ನೆನಪಿಸ್ಕೊಂಡು ಮನೆಯಿಂದ ಹೊರ ಬರ್ತೇನಿ. ದೇವಸ್ಥಾನಕ್ಕೆ ಹೋಗಿ ಬರ್ತೇನಿ, ನಿಮ್ಮಿಂದ ರಕ್ಷಣೆ ಬೇಕಪ್ಪಾ ಎಂದು ಪರೋಕ್ಷವಾಗಿ ಬೆಳಗಾವಿ ನಾಯಕರಿಂದ ರಕ್ಷಣೆ ಬೇಕು ಎಂದರು. ಈ ವೇಳೆ ರಕ್ಷಣೆ ಯಾಕೆ ಅನ್ನುತ್ತಿದ್ದಂತೆ ಕೈ ಮುಗಿದು ಪ್ರತಿಕ್ರಿಯೆ ನೀಡದೇ ಹಾಗೇ ಹೋದರು.
ಇದೇ ವೇಳೆ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ, ಗಾಂಧಿ ಭಾರತ ಕಾರ್ಯಕ್ರಮಕ್ಕೆ ಸಿದ್ಧತೆ ಎಲ್ಲವೂ ರೆಡಿ ಆಗ್ತಿದೆ. ಇಂದು ಸಂಜೆ ಎಲ್ಲಾ ಟ್ರಯಲ್ ನೋಡುತ್ತೇವೆ. ಪರಮೇಶ್ವರ್ ಅವರು ಕೂಡ ಮುಂಚಿತವಾಗಿ ಬರ್ತಾರೆ. ಜಿಲ್ಲಾ ಉಸ್ತುವಾರಿ ಸಚಿವರು ಸಂಘಟನೆಯಲ್ಲಿ ತೊಡಗಿದ್ದಾರೆ. ಜ.21ರಂದು ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಬರ್ತಾರೆ. ಆ ದಿನ ಮೊದಲು ಗಾಂಧಿಯವರ ಪುತ್ಥಳಿ ಅನಾವರಣ ನಡೆಯಲಿದ್ದು, ಬಳಿಕ ಸಮಾವೇಶ ಕಾರ್ಯಕ್ರಮ ನಡೆಯಲಿದೆ. ಬಿಜೆಪಿ ಸದಸ್ಯತ್ವ ತೆಗೆದುಕೊಂಡವರನ್ನು ಬಿಟ್ಟು ಯಾರು ಬೇಕಾದರೂ ಸಮಾವೇಶಕ್ಕೆ ಬರಬಹುದು ಎಂದರು.