ರಾಮನಗರ:- ಚನ್ನಪಟ್ಟಣವನ್ನು ಚಿನ್ನದ ಪಟ್ಟಣ ಮಾಡುತ್ತೇವೆ ಎಂದು DCM ಡಿಕೆ ಶಿವಕುಮಾರ್ ಘೋಷಣೆ ಮಾಡಿದ್ದಾರೆ.
ಮುನಿರತ್ನ ವಿರುದ್ಧ ಸಾಲು-ಸಾಲು ದೂರು: ಸಮಗ್ರ ತನಿಖೆಗೆ SIT ಗೆ ವಹಿಸಿ ರಾಜ್ಯ ಸರ್ಕಾರ ಆದೇಶ!
ಇಂದು ಚನ್ನಪಟ್ಟಣದಲ್ಲಿ ಹತ್ತು ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಜನ ಈಗ ಅವಕಾಶ ಕೊಟ್ಟಿದ್ದಾರೆ, ಕ್ಷೇತ್ರದ ಸಂಪೂರ್ಣ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಇಡೀ ಸರ್ಕಾರವೇ ನಿಮ್ಮ ಮನೆ ಬಾಗಿಲಿದೆ ಬಂದಿದ್ದು, ನಿಮ್ಮ ಸೇವೆ ಮಾಡ್ತಿದೆ. ಜನ ನಮಗೆ ಸಹಕಾರ ನೀಡದರೆ ಚನ್ನಪಟ್ಟಣ ನಗರವನ್ನ ಚಿನ್ನದ ನಾಡು ಮಾಡುತ್ತೇವೆ ಎಂದು ಹೇಳಿದರು.
ಇದೇ ವೇಳೆ ಚನ್ನಪಟ್ಟಣ ನಗರ ನಿವಾಸಿಗಳಿಗೆ ಪಟ್ಟಣ ವ್ಯಾಪ್ತಿಯಲ್ಲಿ ಇರುವ ಐಡಿಎಸ್ ಎಸ್ ಎಂಟಿ ಲೇಔಟ್ ಬಳಿ 10 ಎಕರೆ 6 ಗುಂಟೆ ವಿಸ್ತೀರ್ಣದಲ್ಲಿ ನಿವೇಶನಗಳನ್ನು ವಿತರಿಸಲು ಲಾಟರಿ ಮೂಲಕ ಫಲನುಭವಿಗಳನ್ನು ಆಯ್ಕೆ ಮಾಡಿ 300 ನಿವೇಶನ ಹಾಗೂ ಪಟ್ಲು ಗ್ರಾಮದಲ್ಲಿ 500 ನಿವೇಶನಗಳನ್ನ ಆಶ್ರಯ ಸಮಿತಿ ಮತ್ತು ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಹಂಚಲಾಯಿತು.