ಬೆಂಗಳೂರು: ಕಳೆದ ಜನವರಿ 13ರಿಂದ ಆರಂಭವಾಗಿರುವ ಪ್ರಯಾಗ್ರಾಜ್ ಮಹಾಕುಂಭಮೇಳ 22ನೇ ದಿನಕ್ಕೆ ಕಾಲಿಟ್ಟಿದೆ. ಫೆಬ್ರವರಿ 26ರವರೆಗೆ ಇನ್ನೂ 23 ದಿನಗಳು ಮಹಾಜಾತ್ರೆ ನಡೆಯಲಿದೆ. ಮಹಾಸಂಕ್ರಾಂತಿ, ಮೌನಿ ಅಮಾವಾಸ್ಯೆ ಹಾಗೂ ನಿನ್ನೆ ವಸಂತ ಪಂಚಮಿ ಸೇರಿ ಒಟ್ಟು ಮೂರು ಶಾಹಿಸ್ನಾನಗಳು ನೆರವೇರಿವೆ.
ಇದೀಗ ಫೆ.9, 10 ರಂದು ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ. ಫೆ.9 ರ ಬೆಳಗ್ಗೆ ಡಿಕೆಶಿ ಪ್ರಯಾಗ್ರಾಜ್ ತಲುಪಲಿದ್ದಾರೆ. ಫೆ.10 ರ ಮಧ್ಯಾನ 1 ಗಂಟೆ ನಂತರ ಪ್ರಯಾಗ್ರಾಜ್ನಿಂದ ವಾಪಾಸ್ ಆಗಲಿದ್ದಾರೆ.
Tulsi Plant: ನಿಮ್ಮ ಮನೆಯಲ್ಲಿ ತುಳಸಿ ಗಿಡವನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ಒಳಿತಾಗುತ್ತೆ? ಇಲ್ಲಿದೆ ಮಾಹಿತಿ
ವಿಶ್ವದ ಅತಿ ದೊಡ್ಡ ಧಾರ್ಮಿಕ ಉತ್ಸವ ಮಹಾ ಕುಂಭಮೇಳಕ್ಕೆ ದಿನದಿಂದ ದಿನಕ್ಕೆ ಭಕ್ತಸಾಗರ ಹರಿದು ಬರುತ್ತಿದೆ. ದೇಶದ ವಿವಿಧ ಕಡೆಯಿಂದ ಭಕ್ತರು ಆಗಮಿಸುತ್ತಿದ್ದು, ಇದೀಗ ಡಿಸಿಎಂ ಡಿಕೆ ಶಿವಕುಮಾರ್ ಕೂಡ ಕುಂಭಮೇಳದಲ್ಲಿ ಭಾಗಿಯಾಗಲಿದ್ದಾರೆ.
ಡಿಕೆಶಿ ಕುಟುಂಬ ಸಮೇತರಾಗಿ ಕುಂಭಮೇಳದಲ್ಲಿ ಭಾಗಿಯಾಗಲಿದ್ದಾರೆ. ಈ ಬಗ್ಗೆ ಹಿಂದೆಯೇ ಡಿಕೆಶಿ ತಿಳಿಸಿದ್ದರು. ಉತ್ತರ ಪ್ರದೇಶದ ಮಂತ್ರಿಗಳು ನನಗೆ ಬಹಳಷ್ಟು ಆತ್ಮೀಯರಿದ್ದು, ಆಮಂತ್ರಣ ನೀಡಿದ್ದಾರೆ. ಹಾಗಾಗಿ ಕುಟುಂಬ ಸಮೇತರಾಗಿ ಭೇಟಿ ನೀಡುವುದಾಗಿ ಹೇಳಿದ್ದರು.