ಬೆಂಗಳೂರು: 2024ನೇ ಸಾಲಿನ ಎರಡನೇ ವರ್ಷದ/ಮೂರನೇ ಸೆಮಿಸ್ಟರ್ನ ಎಂಜಿನಿಯರಿಂಗ್ ಕೋರ್ಸುಗಳ ಪ್ರವೇಶಕ್ಕಾಗಿ ಡಿಸಿಇಟಿ-24ಕ್ಕೆ ನೋಂದಣಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸದೇ ಇರುವ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಸಲು ಮೇ 31ರವರೆಗೆ ಕೊನೆ ಅವಕಾಶ ನೀಡಲಾಗಿದೆ.
Anna Bhagya Scheme: ಮೇ ತಿಂಗಳ ಅನ್ನಭಾಗ್ಯ ಯೋಜನೆಯ ಹಣವು ಇನ್ನೂ ಬಂದಿಲ್ವಾ..? ಈ ಕೆಲಸ ಮಾಡಿ ಸಾಕು
ಶುಲ್ಕ ಪಾವತಿಸಿದ್ದು, ಆದರೆ ಪಾವತಿ ವಿಫಲವಾದ ಕಾರಣ ಬ್ಯಾಂಕಿನಿಂದ ಹಿಂತಿರುಗಿಸಲಾಗಿರುವ ಅಭ್ಯರ್ಥಿಗಳೂ ಸಹ ಮತ್ತೊಮ್ಮೆ ಶುಲ್ಕ ಪಾವತಿಸಬಹುದಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್ಸೈಟ್ ಅನ್ನು ನೋಡಲು ಕೋರಲಾಗಿದೆ.