ನವದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಇಂದು 2024ರ ಇಂಡಿಯನ್ ಪ್ರೀಮಿಯರ್ ಲೀಗ್ ನ 64ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ (LSG) ಮುಖಾಮುಖಿಯಾಗಿವೆ.
ಗರ್ಭಿಣಿ ಮಹಿಳೆಯರೇ ಗಮನಿಸಿ.. ನೀವು ಮಾಡುವ ಈ ತಪ್ಪುಗಳು ಗರ್ಭಪಾತಕ್ಕೆ ಕಾರಣವಾಗಬಹುದು!
ಕಳೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ವಿರುದ್ಧ ಸೋತಿರುವ ಡೆಲ್ಲಿ ತಂಡಕ್ಕೆ ನಾಯಕ ರಿಷಬ್ ಪಂತ್ ಒಂದು ಪಂದ್ಯದ ನಿಷೇಧದ ನಂತರ ಮರಳಲಿದ್ದಾರೆ. ಇನ್ನೊಂದೆಡೆ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಹೀನಾಯವಾಗಿ ಸೋಲು ಕಂಡಿರುವ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ತಂಡದ ಗೆಲ್ಲುವ ನಿರೀಕ್ಷೆಯಲ್ಲಿದೆ. ಇಬ್ಬರಿಗೂ ಗೆಲುವು ಅನಿವಾರ್ಯ. ಅದು ಕೂಡ ದೊಡ್ಡ ಮಾರ್ಜಿನ್ನ ಗೆಲುವು ಬೇಕು.ಇಂದಿನ ರಣರೋಚಕ ಪಂದ್ಯದಲ್ಲಿ ಗೆಲ್ಲುವ ತಂಡವು ಇನ್ನೂ ಪ್ಲೇ-ಆಫ್ಗೆ ತಲುಪುವ ಅವಕಾಶವನ್ನು ಹೊಂದಿರುತ್ತದೆ. ಆದರೆ ಸೋತ ತಂಡದ ಪ್ಲೇ-ಆಫ್ನ ಪ್ರಯಾಣ ಬಹುತೇಕ ಕೊನೆಗೊಳ್ಳಲಿದೆ.
ಡೆಲ್ಲಿ ಈ ಋತುವಿನಲ್ಲಿ 13 ಪಂದ್ಯಗಳನ್ನು ಆಡಿದ್ದು, 6 ಪಂದ್ಯಗಳನ್ನು ಗೆದ್ದರೆ 7 ಪಂದ್ಯಗಳಲ್ಲಿ ಸೋತಿದೆ. ಅಂಕಪಟ್ಟಿಯಲ್ಲಿ 12 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿರುವ ಡೆಲ್ಲಿಗೆ ಇದು ಕೊನೆಯ ಪಂದ್ಯವಾಗಿದೆ.
ಲಕ್ನೋ ಇಲ್ಲಿಯವರೆಗೆ 12 ಪಂದ್ಯಗಳನ್ನು ಆಡಿದ್ದಾರೆ. 6 ಪಂದ್ಯ ಗೆದ್ದು, 6 ಸೋಲು ಕಂಡಿದೆ. ಪ್ರಸ್ತುತ ತಂಡವು ಒಟ್ಟು 12 ಅಂಕಗಳನ್ನು ಹೊಂದಿದ್ದು, ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಡೆಲ್ಲಿ ಮತ್ತು ಲಕ್ನೋ ನಡುವೆ ಇಲ್ಲಿಯವರೆಗೆ ಒಟ್ಟು 4 ಪಂದ್ಯಗಳು ನಡೆದಿವೆ. ಲಕ್ನೋ 3 ಪಂದ್ಯಗಳನ್ನು ಗೆದ್ದಿದ್ದರೆ, ಡೆಲ್ಲಿ ತಂಡ ಕೇವಲ 1 ಪಂದ್ಯವನ್ನು ಗೆದ್ದಿದೆ. ಹೀಗಾಗಿ ಡೆಲ್ಲಿ ವಿರುದ್ಧ ಲಕ್ನೋ ಮೇಲುಗೈ ಸಾಧಿಸಿದೆ. ಇನ್ನೂ ಇಂದಿನ ಪಂದ್ಯದಲ್ಲಿ ಯಾರು ಗೆದ್ದರೆ ಆರ್ಸಿಬಿಗೆ ಪ್ಲಸ್ ಪಾಯಿಂಗ್ ಆಗುತ್ತೆ? ಯಾರು ಗೆದ್ರೂ ಆರ್ಸಿಬಿಗೆ ಮೈನಸ್ ಇವತ್ತು. ಹೌದು, ಇಂದು ಈ 2 ತಂಡಗಳಲ್ಲಿ ಯಾರೇ ಗೆದ್ರೂ ಆರ್ಸಿಬಿಗಿಂತ ಹೆಚ್ಚು ಅಂಕಗಳಿಸಿ ಪಾಯಿಂಟ್ಸ್ ಟೇಬಲ್ನಲ್ಲಿ ಮುಂದೆ ಹೋಗ್ತಾರೆ.