ದಾವಣಗೆರೆ:– ಚಿಕ್ಕಬಳ್ಳಾಪುರ, ಚಿಂತಾಮಣಿಯಿಂದ ದಲಿತ ಮುಖಂಡರು ಬೆಳಗಾವಿ ಅಧಿವೇಶನಕ್ಕೆ ತೆರಳ ಮನವಿ ಸಲ್ಲಿಸಲು ಸೋಮವಾರ ದಾವಣಗೆರೆ ಸಮೀಪ ತೆರಳುವಾಗ ಬಸ್ ಅಪಘಾತವಾಗಿ ಕೆಲವರು ಗಾಯಾಳುಗಳಾಗಿದ್ದಾರೆ.
ಗಾಯಾಳುಗಳನ್ನು ದಾವಣಗೆರೆಯ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಳಿಕ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮವನ್ನು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ವಿಚಾರಿಸಿದರು.
ಇಂದು ಬೆಳಗಿನ ವೇಳೆ ದಾವಣಗೆರೆ ಹೊರಭಾಗದ ಜಿಲ್ಲಾ ಪಂಚಾಯತ್ ಕಚೇರಿ ಬಳಿ ರಾ.ಹೆದ್ದಾರಿಯಲ್ಲಿ ಬಸ್ ಅಪಘಾತವಾಗಿ ಸುಮಾರು 18 ಜನರು ಗಾಯಾಳುಗಳಾಗಿದ್ದಾರೆ. ಇವರು ಚಿಂತಾಮಣಿ, ಚಿಕ್ಕಬಳ್ಳಾಪುರ, ಗೌರಿಬಿದನೂರು ನಿವಾಸಿಗಳಾಗಿದ್ದಾರೆ.
ಈ ವೇಳೆ ಗಾಯಾಳುಗಳಿಗೆ ಸೂಕ್ತವಾದ ಚಿಕಿತ್ಸೆಯನ್ನು ನೀಡಲು ಸೂಚನೆ ನೀಡಿದ ಅವರು ಇವರಿಗೆ ಯಾವುದೇ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದಲ್ಲಿ ಕೂಡಲೇ ನೀಡಲು ತಿಳಿಸಿದರು.
ಜಿಲ್ಲಾ ಸರ್ಜನ್ ಡಾ; ನಾಗೇಂದ್ರಪ್ಪ ಹಾಗೂ ವಿವಿಧ ಮುಖಂಡರು ಉಪಸ್ಥಿತರಿದ್ದರು.