ಬಾಲಿವುಡ್ ನಟಿ ಕಂಗನಾ ರಣಾವತ್ ಹೊಸ ಕಾರು ಖರೀದಿಸುವ ಮೂಲಕ ಸುದ್ದಿಯಾಗಿದ್ದಾರೆ. ಕೆಲವು ದಿನಗಳ ಹಿಂದೆ ಅಧಿಕೃತವಾಗಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡ ಬಳಿಕ ನಟಿ ದುಬಾರಿ ಕಾರು ಖರೀದಿಸಿದ್ದಾರೆ.
ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಅವರು ಚುನಾವಣೆಯಲ್ಲಿ ಸ್ಪರ್ಧಿಸಿರುವ ಕಂಗನಾ ರಣಾವತ್ ಇದೀಗ ಮರ್ಸಿಡಿಸ್ ಮೆಬ್ಯಾಕ್ ಜಿಎಲ್ಎಸ್ ಕಾರು ಪರ್ಚೇಸ್ ಮಾಡಿದ್ದಾರೆ. ಇದರ ಬೆಲೆ ಬರೋಬ್ಬರಿ 2.46 ಕೋಟಿ ರೂಪಾಯಿಯಾಗಿದ್ದು ಹೊಸ ಕಾರಿನ ಕಾರಣಕ್ಕೆ ಕಂಗನಾ ಗಮನ ಸೆಳೆಯುತ್ತಿದ್ದಾರೆ.
ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಕಂಗನಾ ರಣಾವತ್ ಅವರು ಆ್ಯಕ್ಟೀವ್ ಆಗಿದ್ದಾರೆ. ಮೊದಲಿನಿಂದಲೂ ಬಿಜೆಪಿ ಪರವಾದ ನಿಲುವು ಹೊಂದಿರುವ ನಟಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಹೊಗಳುತ್ತಾ ಬಂದಿದ್ದರು. ಈಗ ಅಧಿಕೃತವಾಗಿ ರಾಜಕೀಯಕ್ಕೆ ಎಂಟ್ರಿ ನೀಡಿದ್ದಾರೆ. ಬಿಜೆಪಿಗೆ ಸೇರ್ಪಡೆ ಆಗುತ್ತಿದ್ದಂತೆಯೇ ಐಷಾರಾಮಿ ಕಾರು ಖರೀದಿ ಮಾಡಿರುವುದು ಅಚ್ಚರಿ ಮೂಡಿಸಿದೆ.
ಈ ಮೊದಲು ಕೂಡ ಕಂಗನಾ ರಣಾವತ್ ಅವರ ಬಳಿ ಐಷಾರಾಮಿ ಕಾರು ಇತ್ತು. ಅವರು ಈ ಹಿಂದೆ ಖರೀದಿಸಿದ್ದ ಮರ್ಸಿಡಿಸ್ ಮೆಬ್ಯಾಕ್ ಎಸ್680 ಕಾರಿನ ಬೆಲೆ 3.6 ಕೋಟಿ ರೂಪಾಯಿ. ಇದೀಗ ಮತ್ತೊಂದು ದುಭಾರಿ ಕಾರನ್ನು ನಟಿ ಖರಿದಿಸಿದ್ದಾರೆ. ಕಂಗನಾ ರಣಾವತ್ ಮುಂಬೈನ ಬೀದಿಗಳಲ್ಲಿ ಹೊಸ ಕಾರಿನಲ್ಲಿ ಸುತ್ತಾಡಿದ ವಿಡಿಯೋ ವೈರಲ್ ಆಗಿದೆ.