IPL 2025ರ ಮೆಗಾ ಹರಾಜಿನಲ್ಲಿ ಆಸೀಸ್ ಆಟಗಾರನಿಗೆ ಬಿಗ್ ಶಾಕ್ ಎದುರಾಗಿದೆ. ಐಪಿಎಲ್ನ ಯಶಸ್ವಿ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರಾದ ವಾರ್ನರ್ಗೆ ದೊಡ್ಡ ಶಾಕ್. ಯಾವ ಫ್ರಾಂಚೈಸಿಯೂ ಅವರನ್ನು ಕೊಂಡುಕೊಳ್ಳಲು ಆಸಕ್ತಿ ತೋರಿಸಲಿಲ್ಲ. ಎಡಗೈ ಬ್ಯಾಟರ್ ಡೇವಿಡ್ ವಾರ್ನರ್ ಐಪಿಎಲ್ನ ಯಶಸ್ವಿ ಓಪನ್ನರ್ಗಳಲ್ಲಿ ಒಬ್ಬರೆನಿಸಿಕೊಂಡಿದ್ದಾರೆ.
ಅಜ್ಜಿ ಮೇಲೆಯೇ ರೇಪ್ ಗೆ ಯತ್ನಿಸಿದ ಮೊಮ್ಮಗ: ಚಿಕ್ಕಮಗಳೂರು ಜೋಡಿ ಕೊಲೆ ಕೇಸ್ಗೆ ಸಿಕ್ತು ಟ್ವಿಸ್ಟ್!
IPL 2025ರ ಮೆಗಾ ಹರಾಜು ಪ್ರಕ್ರಿಯೆ ಮುಕ್ತಾಯ ಆಗಿದ್ದು, ಈ ವೇಳೆ ಹರಾಜಿನಲ್ಲಿದ್ದ ಡೇವಿಡ್ ವಾರ್ನರ್ ಖರೀದಿಗೆ ಯಾವ ಪ್ರಾಂಚೈಸಿಗಳು ಆಸಕ್ತಿ ತೋರಿಲ್ಲ ಎನ್ನಲಾಗಿದೆ.
ಹೀಗಾಗಿ ಮುಂಬರುವ ಐಪಿಎಲ್ನಲ್ಲಿ ಆಸೀಸ್ನ ಎಡಗೈ ದಾಂಡಿಗ ಕಾಣಿಸಿಕೊಳ್ಳುವುದಿಲ್ಲ. ಅಂತಿಮ ಸುತ್ತಿನ ಶಾರ್ಟ್ ಲಿಸ್ಟ್ನಲ್ಲೂ ವಾರ್ನರ್ಗೆ ಸ್ಥಾನ ಲಭಿಸಿಲ್ಲ. ಈ ಮೂಲಕ ಡೇವಿಡ್ ವಾರ್ನರ್ ಅನ್ಸೋಲ್ಡ್ ಆಗಿಯೇ ಉಳಿದಿದ್ದಾರೆ.
ಕಳೆದ ಸೀಸನ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದ ವಾರ್ನರ್ ಈ ಬಾರಿ ಕೂಡ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದರು. ಆದರೆ 38 ವರ್ಷದ ವಾರ್ನರ್ ಅವರ ಖರೀದಿಗೆ ಯಾವುದೇ ಫ್ರಾಂಚೈಸಿ ಮುಂದಾಗಲಿಲ್ಲ. ಇದರೊಂದಿಗೆ ಐಪಿಎಲ್ನಲ್ಲಿ ವಾರ್ನರ್ ಅವರ ಯುಗಾಂತ್ಯವಾಗಿದೆ ಎಂದೇ ಹೇಳಬಹುದು.
ಏಕೆಂದರೆ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿರುವ ವಾರ್ನರ್ಗೆ ಮತ್ತೆ ಐಪಿಎಲ್ನಲ್ಲಿ ಚಾನ್ಸ್ ಸಿಗುವ ಸಾಧ್ಯತೆಯಿಲ್ಲ. ಅಲ್ಲದೆ ಮುಂದಿನ ಸೀಸನ್ ಮಿನಿ ಹರಾಜಿನ ಮೂಲಕ ಕಂಬ್ಯಾಕ್ ಮಾಡುವುದು ಕೂಡ ಅನುಮಾನ. ಹೀಗಾಗಿಯೇ ಐಪಿಎಲ್ನಲ್ಲಿ ಡೇವಿಡ್ ವಾರ್ನರ್ ಅವರ ಯುಗಾಂತ್ಯವಾಗಿದೆ ಎನ್ನಬಹುದು.