ದಾವಣಗೆರೆ : ಇಂದು ದಾವಣಗೆರೆ ವಿಶ್ವ ವಿದ್ಯಾಲಯದ 11ನೇ ಘಟಿಕೋತ್ಸವ ನಡೆಯಲಿದ್ದು ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯ ಒಟ್ಟು 14,357 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತೆ.
ಒಟ್ಟು 45 ವಿದ್ಯಾರ್ಥಿಗಳಿಗೆ ಚಿನ್ನದ ಪದಕ, 64 ಸಂಶೋದನಾ ವಿದ್ಯಾರ್ಥಿಗಳಿಗೆ ಪಿಎಚ್ ಡಿ ಪದವಿ. ಸ್ನಾತಕೋತ್ತರ ವಾಣಿಜ್ಯ ಶಾಸ್ತ್ರ ಅಧ್ಯಯನ ವಿಭಾಗದಲ್ಲಿ ದೀಪ್ತಿ ಜೆ ಗೌಡರ 5 ಚಿನ್ನದ ಪದಕ. ಸ್ನಾತಕ ಪದವಿಯಲ್ಲಿ ಎಸ್ ಎಂ ಎಸ್ ಕಾಲೇಜ್ ನ ಎಸ್.ಸಿಂಧುಬಾಯಿಗೆ 3 ಚಿನ್ನದ ಪದಕ ನೀಡಲಾಗುತ್ತೆ.
ಕಳೆದ ಬಾರಿ ಬಿಎ, ಬಿಕಾಂ, ಬಿಎಸ್ಸಿ,ಬಿಎಡ್, ಬಿಪಿಎಡ್,ಬಿಬಿಎ ಸೇರಿ ಸ್ನಾತಕ ಪದವಿಯಲ್ಲಿ ಒಟ್ಟು 16,140 ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಿದ್ದರು. ಒಟ್ಟು 12,265 ವಿದ್ಯಾರ್ಥಿಗಳು ಉತ್ತೀರ್ಣ. ಈ ಪೈಕಿ 4977 ಪುರುಷ ಹಾಗೂ 7288 ಮಹಿಳಾ ವಿದ್ಯಾರ್ಥಿಗಳು. ಒಟ್ಟು 9 ವಿದ್ಯಾರ್ಥಿಗಳು ಪ್ರಥಮ ರ್ಯಾಂಕ್. 12 ವಿದ್ಯಾರ್ಥಿಗಳು ಚಿನ್ನದ ಪದಕ. 20 ವಿದ್ಯಾರ್ಥಿಗಳು ಎರಡು ಮತ್ತು ಮೂರನೇ ರಾಂಕ್.
ಸ್ನಾತಕೋತ್ತರ ಪದವಿಯಲ್ಲಿ ಒಟ್ಟು 2177 ವಿದ್ಯಾರ್ಥಿಗಳು ಹಾಜರು. 2092 ವಿದ್ಯಾರ್ಥಿಗಳು ತೇರ್ಗಡೆ.778 ವಿದ್ಯಾರ್ಥಿಗಳು ಮತ್ತು 1314. ವಿದ್ಯಾರ್ಥಿನಿಯರು ಪದವಿಗೆ ಭಾಜನ.
ಈ ಬಾರಿ 32 ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಸೇರಿ 64 ವಿದ್ಯಾರ್ಥಿಗಳಿಗೆ ಪಿಎಚ್ ಡಿ ಪ್ರದಾನ. ಈ ಮೂಲಕ ಸಾಧನೆ ಮಾಡಿದ ದಾವಣಗೆರೆ ವಿಶ್ವ ವಿದ್ಯಾಲಯ.
Lok Sabha Elections 2024: ಪ್ರಧಾನಿ ಮೋದಿ ಕರ್ನಾಟಕ ಭೇಟಿಗೆ ದಿನಾಂಕ ಫಿಕ್ಸ್: ಈ ಕ್ಷೇತ್ರಗಳೇ ಬಿಗ್ ಟಾರ್ಗೆಟ್!
ವಿವಿ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಮಾಹಿತಿ ನೀಡಿದ್ದು ಘಟಿಕೋತ್ಸವದ ಅಧ್ಯಕ್ಷತೆ ವಹಿಸಲಿರುವ ರಾಜ್ಯಪಾಲ ಮತ್ತು ಕುಲಾಧಿಪತಿ ಥಾವರ್ ಚಂದ್ ಗೆಹ್ಲೋಟ್. ಭಾಗಿಯಾಗಲಿರುವ ಉನ್ನತ ಶಿಕ್ಷಣ ಸಚಿವ ಎಮ್.ಸಿ. ಸುಧಾಕರ್, ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್.ಕಿರಣಕುಮಾರ್ ಘಟಿಕೋತ್ಸವದ ಭಾಷಣ ಮಾಡಲಿದ್ದಾರೆ.