ದಾವಣಗೆರೆ:- ಶೇಂಗಾ ತುಂಬಿದ್ದ ಮಿನಿ ಟ್ರಕ್ ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿ ಹೊಡೆದ ಘಟನೆ ದಾವಣಗೆರೆ ತಾಲ್ಲೂಕಿನ ಹಾಲುವರ್ತಿ ಬಳಿ ಜರುಗಿದೆ.
ಶೇಂಗಾ ತೆಗೆದುಕೊಳ್ಳಲು ಜನತೆ ಮುಗಿ ಬೀಳುತ್ತಿದ್ದು, ಅದೃಷ್ಟವಶಾತ್ ಟ್ರಕ್ ಸವಾರ ಬಚಾವ್ ಆಗಿದ್ದಾರೆ. ಚಿತ್ರದುರ್ಗದಿಂದ ದಾವಣಗೆರೆ ಕಡೆಗೆ ಶೇಂಗಾ ತುಂಬಿಕೊಂಡು ಟ್ರಕ್ ಬರುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿಯಾಗಿ ಪಲ್ಟಿ ಎನ್ನಲಾಗಿದೆ.