ದಾವಣಗೆರೆ: 2ಎ ಮೀಸಲಾತಿಗೆ ಆಗ್ರಹಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದ ಜಯಮೃತ್ಯುಂಜ ಶ್ರೀ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ನಿರ್ಧಾರ ಕೈ ಬಿಟ್ಟಿದ್ದಾರೆ. ಗಡುವು ಕೇಳಿರುವ ಸಿಎಂ ಸಿದ್ದರಾಮಯ್ಯ ಆದ್ದರಿಂದ ಮುತ್ತಿಗೆಗೆ ತಾತ್ಕಾಲಿಕೆ ತಡೆ ನೀಡಿದ್ದೇವೆ ಎಂದ ಸ್ವಾಮೀಜಿ ಹೇಳಿದರು. ದಾವಣಗೆರೆಯಲ್ಲಿ ಮಾತನಾಡಿದ ಅವರು, ಜ.20 ರೊಳಗೆ ಇರುವ ಕಾನೂನು ಪ್ರಕ್ರಿಯೆ ಮುಗಿಸಬೇಕು.
ಮುಗಿಸಿ ಕೇಂದ್ರಕ್ಕೆ ಶಿಫಾರಸು ಮಾಡಬೇಕು. ಸಮಾಜದ ಮುಖಂಡರು ಮತ್ತು ಸಿಎಂ ಮಾತು ಕೇಳಿ ಮುತ್ತಿಗೆ ಮುಂದೂಡಿದ್ದೇವೆ. ಇದರಲ್ಲಿ ಸಿಎಂ ತಮ್ಮ ಮಾತನ್ನ ಉಳಿಸಿಕೊಳ್ಳಬೇಕು. ಮಾತಿಗೆ ತಪ್ಪದಿರುವುದೇ ನಿಮ್ಮ ವ್ಯಕ್ತಿತ್ವಕ್ಕೆ ಮೇರುಗನ್ನಡಿ. ಇಲ್ಲದಿದ್ದರೆ ಮುಂದಿನ ತೀರ್ಮಾಣ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಇನ್ನೂ ಈ ಬಗ್ಗೆ ಚರ್ಚಿಸಿಲು ಕೂಡಲಸಂಗಮದಲ್ಲಿ ಸಮಾಜದ ಮುಖಂಡರ ಸಭೆ ನಡೆಯಲಿದೆ. ಸಭೆಯಲ್ಲಿ ಎಲ್ಲ ಮುಖಂಡರು ಸೇರಿ ಒಂದು ನಿರ್ಧಾರಕ್ಕೆ ಬರುತ್ತೇವೆ. ಸಭೆಯಲ್ಲಿ ಸರ್ಕಾರದ ಮೇಲೆ ಒತ್ತಡ ಹಾಕಲು ನಿರ್ಧಾರ ತೆಗೆದುಕೊಳ್ಳಲಾಗುವುದು. ಒಳಪಂಗಡಗಳು ನಾವೆಲ್ಲ ಸೇರಿ ಸರ್ಕಾರದ ಗಮನ ಸೆಳೆಯೋಣ ಎಂದು ದಾವಣಗೆರೆಯಲ್ಲಿ ಜಯಮೃತ್ಯುಂಜಯ ಶ್ರೀಗಳು ಹೇಳಿದರು.