ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ (Chikkamagaluru) 3 ದಿನಗಳ ಕಾಲ ದತ್ತಜಯಂತಿ (Dattajayanthi) ಅದ್ಧೂರಿಯಾಗಿ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ದತ್ತಮಾಲಾಧಾರಿ ಸಿ.ಟಿ ರವಿಯವರು (CT Ravi) ಭಿಕ್ಷಾಟನೆ ಆರಂಭಿಸಿದ್ದಾರೆ
ಸಿ.ಟಿ ರವಿಯವರು ಮನೆ-ಮನೆಗೆ ತೆರಳಿ ಪಡಿ ಸಂಗ್ರಹಿಸುತ್ತಿದ್ದಾರೆ. ಚಿಕ್ಕಮಗಳೂರು ನಗರದ ನಾರಾಯಣಪುರದಲ್ಲಿ 9 ಮನೆಯಲ್ಲಿ ಭಿಕ್ಷೆ ಬೇಡಿ ಪಡಿ ಸಂಗ್ರಹಿಸಿದ್ದಾರೆ. ಈ ವೇಳೆ ಸಿ.ಟಿ ರವಿಯವರಿಗೆ 20ಕ್ಕೂ ಹೆಚ್ಚು ಮಾಲಾಧಾರಿಗಳ ಸಾಥ್ ನೀಡಿದ್ದಾರೆ. ಸಿಟಿ ರವಿಯವರ ಪಡಿ ಸಂಗ್ರಹಲ್ಲಿದ್ದ ವಸ್ತುಗಳನ್ನ ಇರುಮುಡಿ ರೂಪದಲ್ಲಿ ಮಂಗಳವಾರ ದತ್ತಪೀಠಕ್ಕೆ ಹೊತ್ತೊಯ್ಯುತ್ತಾರೆ.
ಪಡಿಯಲ್ಲಿ ಏನೇನಿರುತ್ತೆ..?: ಅಕ್ಕಿ, ಬೇಳೆ,ಕಾಯಿ, ಬೆಲ್ಲ ಎಲೆ, ಅಡಿಕೆ ಇವಿಷ್ಟು ದತ್ತಜಯಂತಿಗೆ ನೀಡುವ ಪಡಿಯಲ್ಲಿರುತ್ತವೆ.