ಬೆಂಗಳೂರು:– ಪ್ರತಿ ವರ್ಷ ವಿಭಿನ್ನ ಥೀಮ್ನಲ್ಲಿ ಫ್ಲವರ್ ಶೋ ಆಯೋಜಿಸುವ ಮೂಲಕ ಲಾಲ್ ಬಾಗ್ ನಲ್ಲಿ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಜನರು ಕಾತರದಿಂದ ಇರುತ್ತಾರೆ.
ಹೆಸರು, ಅಂತಸ್ತು ಬಂದ ಮೇಲೆ ಕೊಹ್ಲಿ ಬದಲಾಗಿದ್ದು ನಿಜ: ಬೇಸರ ಹೊರ ಹಾಕಿದ ಮಾಜಿ ಆಟಗಾರ!
ಈ ವರ್ಷ ಕೂಡ ಸ್ವಾತಂತ್ರ್ಯ ದಿನಾಚರಣೆಯ ಸಲುವಾಗಿ ಲಾಲ್ ಬಾಗ್ನಲ್ಲಿ ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಅವರ ಜೀವನ ಗಾಥೆಯನ್ನು ಬಿಂಬಿಸುವ ಪುಷ್ಪ ಪ್ರದರ್ಶನ ಆಯೋಜಿಸಲಾಗುತ್ತಿದ್ದು, ಆಗಸ್ಟ್ 8 ರಿಂದ 19 ರವರೆಗೆ ಫಲಪುಷ್ಪ ಪ್ರದರ್ಶನಕ್ಕೆ ದಿನಾಂಕ ನಿಗದಿ ಮಾಡಲಾಗಿದೆ.
ಫ್ಲವರ್ ಶೋನಲ್ಲಿ 60ಕ್ಕೂ ಹೆಚ್ಚು ಬಗೆಯ ಹೂಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದು, ಒಟ್ಟು 15 ಲಕ್ಷದಷ್ಟು ಹೂಗಳನ್ನು ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಸದ್ಯ ಲಾಲ್ ಬಾಗ್ ಗಾರ್ಡನ್ನಲ್ಲಿ 4 ಸಾವಿರಕ್ಕೂ ಹೆಚ್ಚು ವಿವಿಧ ಬಗೆಯ ಹೂಗಳನ್ನು ಸಿದ್ಧಮಾಡಿಕೊಳ್ಳಲಾಗುತ್ತಿದೆ.
ಫ್ಲವರ್ ಶೋನಲ್ಲಿ ಆಂಥೋರಿಯಂ ಹೂಗಳು, ಗುಲಾಬಿ, ಜರ್ಬೆರಾ, ಆರ್ಕಿಡ್, ನಂದಿ ಗಿರಿಧಾಮದ ಇಂಪೇಷನ್ಸ್ ಹೂಗಳು, ರೆಡ್ಹಾಟ್ ಪೋಕರ್, ಆಲ್ಸ್ಟೋಮೇರಿಯನ್ ಲಿಲ್ಲಿ, ಪೂಷಿಯಾ, ಅಗಪಾಂಥಸ್, ಸೈಕ್ಲೋಮನ್, ಕ್ಯಾಲಾಲಿಲ್ಲಿ, ಸುಗಂಧ ರಾಜ, ಕುಂಡಗಳಲ್ಲಿ ಅರಳಿದ ದೇಶ-ವಿದೇಶಗಳ ಹತ್ತಾರು ಬಗೆಯ ಹೂಗಳು, ಬೋಗನ್ವಿಲ್ಲಾದ ಹೂ ಗಿಡಗಳು, ಲಿಲ್ಲಿ, ಜರ್ ಬೆರಾ ಹೂಗಳು, ಕೊಲಂಬಿಯಾ, ನೆದರ್ ಲ್ಯಾಂಡ್ಸ್, ಬೆಲ್ಜಿಯಂ, ಕೀನ್ಯಾ, ಆಸ್ಟ್ರೇಲಿಯಾದಿಂದ ಆಮದು ಮಾಡಿದ ಹೂಗಳು ಇರಲಿವೆ.
ಫ್ಲವರ್ ಶೋ ವೀಕ್ಷಿಸಲು ವಯಸ್ಕರಿಗೆ 80 ರೂ. ಪ್ರವೇಶ ದರ ನಿಗದಿಯಾಗಿದ್ದು, ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಇದು 214ನೇ ಫಲಪುಷ್ಪ ಪ್ರದರ್ಶನವಾಗಿರಲಿದೆ