ಬೆಂಗಳೂರು: ಆತ ಸೋಷಿಯಲ್ ಮೀಡಿಯಾದಲ್ಲಿ ಒಂದ್ ರೀತಿ ಸ್ಟಾರ್ ಆಗ್ಬಿಟ್ಟಿದ್ದ. ಮೈಮೇಲೆ ಕೆಜಿಗಟ್ಟಲೆ ಚಿನ್ನ ಹಾಕೊಂಡು ವಿಡಿಯೋಗಳ ಮೇಲೆ ವಿಡಿಯೋ ಮಾಡಿಸ್ತಿದ್ದ. ಆದ್ರೆ ರೌಡಿ ಆಕ್ಟಿವಿಟಿಯಲ್ಲೂ ಭಾಗಿಯಾಗ್ತಿದ್ದ ಅಸಾಮಿ ಲ್ಯಾಂಡ್ ಲಿಟಿಗೇಷನ್ ಗೆ ಕೈಹಾಕಿ ಈಗ ಜೈಲು ಪಾಲಾಗಿದ್ದಾನೆ. ಈತನನ್ನ ನೋಡ್ತಿದ್ರೆ ಮಿನಿ ಜ್ಯೂವಲಿರಿ ಶಾಪ್ ಅಂದ್ರೆ ತಪ್ಪೇನಿಲ್ಲ. ಮೈಮೇಲೆ ಕೆಜಿಗಟ್ಟಲೇ ಚಿನ್ನ ಹಾಕೊಂಡು ಸುತ್ತಾ ಹುಡುಗರನ್ನ ಇಟ್ಕೊಂಡು ಈತ ಕೊಡ್ತಿದ್ದ ಬಿಲ್ಡಪ್ಗೆ ಕಮ್ಮಿ ಇರ್ಲಿಲ್ಲ. ಆದ್ರೆ ಈ ಅಸಾಮಿ ಯಲಹಂಕ ಸುತ್ತಮುತ್ತ ರೌಡಿ ಚಟುವಟಿಕೆಯಲ್ಲೂ ಭಾಗಿಯಾಗ್ತಿದ್ದ. ಈತನ ಮೇಲೆ ಮೊದಲೇ ಒಂದು ಕಣ್ಣಿಟ್ಟಿದ್ದ ಖಾಕಿ ಪಡೆ ಪ್ರಕರಣವೊಂದರಲ್ಲಿ ಈಗ ಜೈಲಿಗಟ್ಟಿದೆ.
ಯೆಸ್. ದಾಸ ಅಲಿಯಾಸ್ ದಾಸ ಕಿಂಗ್ ಮೇಕರ್ ಎಂದೇ ಕುಖ್ಯಾತನಾಗಿರೋ ಈತನೆ ಈಗ ಜೈಲು ಪಾಲಾಗಿರೋ ಅಸಾಮಿ. ಅಷ್ಟಕ್ಕೂ ಆಗಿದ್ದೇನು ಅಂದ್ರೆ ಯಲಹಂಕ ಠಾಣಾ ವ್ಯಾಪ್ತಿಯಲ್ಲಿ ರಾಮಮೂರ್ತಿ ಮತ್ತು ರಾಮದೇವಿ ಅನ್ನೋರು ನಡುವೆ ಜಮೀನು ವಿವಾದ ಇತ್ತು. ಈ ವಿಚಾರವನ್ನ ರಾಮಮೂರ್ತಿ ಅನಧಿಕೃತ ಪ್ರಾಪರ್ಟಿ ಡೀಲರ್ ಆಗಿದ್ದ ದಾಸನಿಗೆ ತಿಳಿಸಿ ಸಹಾಯ ಮಾಡಲು ಕೇಳಿರ್ತಾನೆ. ಅದರಂತೆ ದಾಸ ರಾಮಮೂರ್ತಿ ಜೊತೆ ತನ್ನ ಹುಡುಗರನ್ನ ಕಳುಹಿಸಿ ರಾಮದೇವಿ ಮೇಲೆ ಗಲಾಟೆ ಮಾಡಿಸ್ತಾನೆ. ಈ ವೇಳೆ ಆರೋಪಿಗಳು ರಾಮದೇವಿ ಕೆನ್ನೆಗೆ ಹೊಡೆದಿದ್ದರಿಂದ ಆಕೆಯ ಕಿವಿಯಲ್ಲಿ ರಕ್ತ ಬಂದು ಆಸ್ಪತ್ರೆ ಸೇರಿರ್ತಾತೆ. ಅಷ್ಟಲ್ಲದೇ ಆಕೆಯ ಬಗ್ಗೆ ಜಾತಿ ನಿಂದನೆ ಕೂಡ ಮಾಡಿರ್ತಾರೆ.
ಈ ಘಟನೆ ಬಗ್ಗೆ ಮಹಿಳೆ ಯಲಹಂಕ ಠಾಣೆಯಲ್ಲಿ ದೂರು ನೀಡಿ, ದಾಸನ ಹೆಸರನ್ನು ಉಲ್ಲೇಖಿಸಿದ್ರು. ಬಳಿಕ ರಾಮಮೂರ್ತಿ ಸೇರಿದಂತೆ ಮೂವರು ಆರೋಪಿಗಳು ನಿರೀಕ್ಷಣಾ ಜಾಮೀನು ಪಡೆದು ಬಚಾವಾಗಿರ್ತಾರೆ. ಆದ್ರೆ ಹುಡುಗರನ್ನ ಕಳುಹಿಸಿ ಹಲ್ಲೆ ಮಾಡಿಸಿದ ಆರೋಪದ ಮೇಲೆ ದಾಸನನ್ನ ಬಂಧಿಸಿರೋ ಯಲಹಂಕ ಪೊಲೀಸರು ಜೈಲಿಗಟ್ಟಿದ್ದಾರೆ. ಅಷ್ಟಲ್ಲದೇ ಆರೋಪಿಯ ದೌರ್ಜನ್ಯ ಹೆಚ್ಚಾದ ಹಿನ್ನಲೆ ರೌಡಿ ಪಟ್ಟಿ ತೆರೆಯಲು ಕೂಡ ಸಿದ್ಧತೆ ನಡೆದಿದೆ. ಮೊದಲೇ ರೌಡಿ ಚಟುವಟಿಕೆಯಲ್ಲಿ ಭಾಗಿಯಾಗಿ ಪೊಲೀಸರ ವಾಂಟೆಂಡ್ ಲಿಸ್ಟ್ನಲ್ಲಿದ್ದ ದಾಸ ಯಾರದ್ದೋ ಆಸ್ತಿ ವಿವಾದಕ್ಕೆ ತಲೆ ಹಾಕಿ ಜೈಲು ಸೇರಿದ್ದಾನೆ. ಆದ್ರೆ ನಿರೀಕ್ಷಣಾ ಜಾಮೀನು ಪಡೆದುಕೊಂಡಿರೋ ಇನ್ನುಳಿದ ಆರೋಪಿಗಳು ಸದ್ಯಕ್ಕೆ ಕಾನೂನಿನ ಸೆರೆಯಿಂದ ತಪ್ಪಿಸಿಕೊಂಡಿದ್ದಾರೆ.