ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಕೇಸ್ನಲ್ಲಿ ಎ2 ಆಗಿರುವ ನಟ ದರ್ಶನ್ ಅವರಿಗೆ ಈಗ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಅವರ ಮಧ್ಯಂತರ ಜಾಮೀನು ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಸದ್ಯ ಅವರು ಬೆನ್ನು ನೋವಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಂದಿನ ದಿನಾಂಕದವರೆಗೂ ಮಧ್ಯಂತರ ಜಾಮೀನು ವಿಸ್ತರಣೆ ಮಾಡಿ ಹೈಕೋರ್ಟ್ ಆದೇಶ ನೀಡಿದೆ.
ಆದ್ರೆ ಇದುವರೆಗೂ ದರ್ಶನ್ ಗೆ ಯಾವುದೇ ಸರ್ಜರಿ ಆಗಿಲ್ಲ ಎನ್ನಲಾಗಿದೆ. ಇನ್ನೂ ಕೂಡಾ ನಟನಿಗೆ ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ತಿಳಿದು ಬಂದಿದೆ. ಇವತ್ತು ಸರ್ಜರಿ ಮಾಡುವ ಬಗ್ಗೆ ಆಸ್ಪತ್ರೆಯಿಂದ ಸ್ಥಳೀಯ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದೆ.
ಕಡಿಮೆ ಬಜೆಟ್ʼನಲ್ಲಿ ರಸಗೊಬ್ಬರದ ವ್ಯಾಪಾರ ಮಾಡಿ 15 ಲಕ್ಷದವರೆಗೂ ಲಾಭ ಪಡೆಯಿರಿ.!
ದರ್ಶನ್ ಆರೋಗ್ಯದ ಸ್ಥಿತಿ ನೋಡಿಕೊಂಡು ಸರ್ಜರಿ ಮಾಡಲಿದ್ದಾರೆ ಎನ್ನಲಾಗಿದೆ. ಸದ್ಯ ರೆಗ್ಯುಲರ್ ಬೇಲ್ ತೀರ್ಪು ಬರುವವರೆಗೂ ದರ್ಶನ್ ಗೆ ಮಧ್ಯಂತರ ಜಾಮೀನು ವಿಸ್ತರಣೆ ಮುಂದುವರಿಕೆ ಇದೆ. ದರ್ಶನ್ ಗೆ ಸರ್ಜರಿ ಮಾಡುವ ಬಗ್ಗೆ ಆಸ್ಪತ್ರೆಯಿಂದಲೇ ಅಧಿಕೃತವಾಗಿ ತಿಳಿಯಬೇಕಿದೆ.
ಫಿಸಿಯೋಥೆರಪಿ ಹಾಗೂ ಔಷದಿಗಳ ಮೂಲಕವೇ ದರ್ಶನ್ ಗೆ ಸರ್ಜರಿ ಮಾಡಲು ಬೇಕಾದ ಆರೋಗ್ಯವನ್ನು ವೈದ್ಯರು ಸಮತೋಲನಕ್ಕೆ ತಂದಿದ್ದಾರೆ ಎಂದು ಹೇಳಲಾಗ್ತಿದೆ. ವೈದ್ಯ ನವೀನ್ ಅಪ್ಪಾಜಿಗೌಡ ಸರ್ಜರಿಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಪತ್ನಿ ವಿಜಯಲಕ್ಷ್ಮಿಯಿಂದ ಗಂಡನ ಸರ್ಜರಿಗೆ ಇನ್ನೂ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ ಎನ್ನಲಾಗುತ್ತಿದೆ. ಪತಿ ಸರ್ಜರಿ ಬಗ್ಗೆ ಇನ್ನೂ ಆತಂಕದಲ್ಲೇ ಇರುವ ವಿಜಯಲಕ್ಷ್ಮಿ ಅವರು ಸರ್ಜರಿ ನಂತರದ ಪರಿಣಾಮಗಳು ಹಾಗೂ ಆರೋಗ್ಯದ ಪರಿಸ್ಥಿತಿ ಬಗ್ಗೆ ಆತಂಕದಲ್ಲಿದ್ದಾರಂತೆ.
ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಒಕೆ ಎಂದ ತಕ್ಷಣವೇ ಸರ್ಜರಿ ಮಾಡಲು ವೈದ್ಯ ನವೀನ್ ಅಪ್ಪಾಜಿಗೌಡ ಸಿದ್ದತೆ ಮಾಡಿದ್ದಾರೆ. ಸರ್ಜರಿ ಅಗತ್ಯತೆ ಹಾಗೂ ಯಾವುದೇ ಸಮಸ್ಯೆ ಆಗೋದಿಲ್ಲವೆಂದು ವೈದ್ಯ ನವೀನ್ ವಿಜಯಲಕ್ಷ್ಮಿಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಡಿಸೆಂಬರ್ 11ಕ್ಕೆ ದರ್ಶನ್ ಅವರ ಶಸ್ತ್ರ ಚಿಕಿತ್ಸೆಗೆ ದಿನಾಂಕ ನಿಗದಿ ಆಗಿದೆ. ಈ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗಿದೆ. ಆದ್ದರಿಂದ ಅವರ ಜಾಮೀನು ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ರೆಗ್ಯುಲರ್ ಬೇಲ್ ವಿಚಾರಣೆಯ ವಾದ-ಪ್ರತಿವಾದ ಮುಗಿದಿದೆ. ಆದೇಶವನ್ನು ಹೈಕೋರ್ಟ್ ಕಾಯ್ದಿರಿಸಿದೆ. ಆದೇಶ ಬರುವ ತನಕ ದರ್ಶನ್ ಅವರ ಮಧ್ಯಂತರ ಜಾಮೀನು ಅವಧಿ ಮುಂದುವರಿಯಲಿದೆ.