ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ್ ಸೇರಿದಂತೆ ಎಲ್ಲ ಆರೋಪಿಗಳಿಗೆ ಜಾಮೀನು ಸಿಕ್ಕಿ ತಿಂಗಳಷ್ಟೇ ಕಳೆದಿದೆ. ಜಾಮೀನು ನೀಡಿದ್ದ ಹೈಕೋರ್ಟ್ ಆದೇಶ ಪ್ರಶ್ನಿಸಿ ಪೊಲೀಸರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಇಂದು ಸುಪ್ರೀಂ ಕೋರ್ಟ್ʼನಲ್ಲಿ ವಿಚಾರಣೆ ನಡೆಯಲಿದೆ. ಇನ್ನೂ ಈ ವಿಚಾರವಾಗಿ ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ನಲ್ಲಿ ಏನ್ ತೀರ್ಪು ಬರುತ್ತೋ ನೋಡೋಣ. ನಾವು ನಮ್ಮ ಕೆಲಸ ಮಾಡಿದ್ದೇವೆ. ಪೊಲೀಸರು ದಾಖಲಾತಿಗಳ, ಮಾಹಿತಿಗಳನ್ನು ಲಾಯರ್ಗಳ ಮೂಲಕ ಸುಪ್ರೀಂ ಕೋರ್ಟ್ಗೆ ಕೊಟ್ಟಿರುತ್ತಾರೆ.
ಚಲಿಸುವ ರೈಲಿನಿಂದ ಫೋನ್ ಕೆಳಗೆ ಬಿದ್ದರೆ ಮರಳಿ ಪಡೆಯುವುದು ಹೇಗೆ ಗೊತ್ತಾ..? ಇಲ್ಲಿದೆ ಮಾಹಿತಿ
ಕೋರ್ಟ್ ನಲ್ಲಿ ಏನ್ ತೀರ್ಮಾನ ಬರುತ್ತೆ ಅ ತೀರ್ಮಾನದ ಆಧಾರದಲ್ಲಿ ಮುಂದುವರೆಯುತ್ತೇವೆ ಅಂತ ತಿಳಿಸಿದರು. ಇನ್ನೂ ಬಿಜೆಪಿ ನಾಯಕ ಶ್ರೀರಾಮುಲು ಕಾಂಗ್ರೆಸ್ಗೆ ಸೇರ್ಪಡೆ ಆಗೋ ವಿಷಯದ ಬಗ್ಗೆ ಮಾಹಿತಿ ಇಲ್ಲ ಅಂತ ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.
ಸದ್ಯ ಕೇಸ್ನಲ್ಲಿ ಜಾಮೀನು ಪಡೆದು ರಿಲೀಫ್ ಆಗಿದ್ದ ದರ್ಶನ್ ಅವರು ಕೆಲ ಕಾಲ ಮೈಸೂರಿನ ಫಾರ್ಮ್ಹೌಸ್ನಲ್ಲಿ ಕಾಲ ಕಳೆದಿದ್ದರು. ಇನ್ನೇನು ಎಲ್ಲ ಸರಿಹೋಯಿತು ಎಂದು ಹಾಯಾಗಿದ್ದ ದರ್ಶನ್ ಅವರಿಗೆ ಸುಪ್ರೀಂ ಕೋರ್ಟ್ನಲ್ಲಿನ ವಿಚಾರಣೆ ಆತಂಕ ತರಿಸಿದೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಜೆ.ಬಿ ಪರಿದಿವಾಲಾ ಹಾಗೂ ಆರ್.ಮಹದೇವನ್ ಅವರ ದ್ವಿಸದಸ್ಯ ಪೀಠ ವಿಚಾರಣೆ ನಡೆಸಲಿದ್ದು, ದರ್ಶನ್ ಬೇಲ್ಗೆ ಕೊಕ್ಕೆ ಬೀಳುತ್ತಾ ಅಥವಾ ರಿಲೀಫ್ ಸಿಗುತ್ತಾ ಎಂದು ಟೆನ್ಷನ್ ಶುರುವಾಗಿದೆ.